ಭಾಬಾಬುಡಾನ್‍ಗಿರಿಯನ್ನು ಸೌಹಾರ್ಧ ಕೇಂದ್ರವನ್ನಾಗಿ ಉಳಿಸಿಕೊಳ್ಳಬೇಕೇ ವಿನಃ ಶಾಂತಿ ಕದಡುವ ಯತ್ನ ಮಾಡಬಾರದು

441

ಚಿಕ್ಕಮಗಳೂರು : ಸೂಫಿ ಸಂತರ ಭಾವೈಕ್ಯತಾ ಕೇಂದ್ರವಾದ ಭಾಬಾಬುಡಾನ್‍ಗಿರಿಯನ್ನು ಸೌಹಾರ್ಧ ಕೇಂದ್ರವನ್ನಾಗಿ ಉಳಿಸಿಕೊಳ್ಳಬೇಕೇ ವಿನಃ ಶಾಂತಿ ಕದಡುವ ಯತ್ನ ಮಾಡಬಾರದು ಎಂದು ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಎಟಲ್ವಾಡ್ ಹೇಳಿದರು. ಅವರು ಗುರುವಾರ ಕೋಮು ಸೌಹಾರ್ಧ ವೇಧಿಕೆಯ ಸೌಹಾರ್ಧ ಮಂಟಪ ಹಮ್ಮಿಕೊಂಡಿದ್ದ ಬಾಬಾಬುಡಾನ್‍ಗಿರಿಗೆ ಸೌಹಾರ್ಧ ನಡಿಗೆ ಕಾರ್ಯಕ್ರಮದಲ್ಲಿ ತೆರಳಿ ಗುಹೆಯೊಳಗೆ ತೆರಳಿ ಅಲ್ಲಿನ ಸ್ಥಿತಿಗತಿಯನು ಅವಲೋಕಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ರಾಷ್ಟ್ರದಲ್ಲಿರುವ ಕೆಲವೇ ಭಾವೈಕ್ಯ ತಾಣಗಳಲ್ಲಿ ಇದೂ ಒಂದಾಗಿದೆ. ಇಲ್ಲಿನ ಪರಿಸರಕ್ಕೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗಳನ್ನು ಸಹಿಸಲು ಸಾದ್ಯವಿಲ್ಲ ಎಂದ ಅವರು, ಹಚ್ಚ ಹಸಿರಿನಿಂದ ಕಂಗೊಳಿಸಿ ಪ್ರವಾಸಿಗರಿಗೆ ಮುಕ್ತವಾಗಿದ್ದ ಈ ಪ್ರದೇಶವನ್ನು ಜೈಲಿನಂತೆ ಪರಿವರ್ತಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಂತರ ಕೋಮುಸೌಹಾರ್ಧ ವೇಧಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ಕಳೆದ 15 ವರ್ಷಗಳಿಂದ ಸಂಘ ಪರಿವಾರದ ಎಲ್ಲಾ ರೀತಿಯ ಪ್ರತಿರೋಧಗಳನ್ನು ಹಿಮ್ಮೆಟ್ಟಿಸಿ ಬಾಬಾಬುಡಾನ್‍ಗಿರಿಯನ್ನು ಸೌಹಾರ್ಧ ಕೇಂದ್ರವಾಗಿ ಉಳಿಸಿಕೊಳ್ಳುವಲ್ಲಿ ಸಂಘಟನೆ ವಹಿಸಿದ ಪಾತ್ರ ಗಣನೀಯ. ಇದರಲ್ಲಿ ಗೌರಿ ಲಂಕೇಶ್ ಪಾತ್ರವೂ ಸ್ಮರಣೀಯವಾಗಿದೆ. ಗೌರಿ ಲಂಕೇಶ್‍ರನ್ನು ಹೋರಾಟಗಾರ್ತಿಯಾಗಿ ರೂಪಿಸಿದ ಪ್ರದೇಶವೂ ಇದಾಗಿದೆ. ಸಂಘಪರವಾರ ನಡೆಸಿದಂತೆ ಅಯೋದ್ಯೆಯನ್ನಾಗಿಸಲು ಬಿಡಲಿಲ್ಲ. ಕರ್ನಾಟಕವನ್ನು ಗುಜರಾತ್ ಮಾಡಲು ಬಿಡುವುದಿಲ್ಲ.ಅದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದ ಎಂದು ನುಡಿದರು. ಬಳಿಕ ತೀಸ್ತಾ ಸೆಟಲ್ವಾಡ್ ಮಾಣಿಕ್ಯಧಾರಕ್ಕೆ ತೆರಳಿ ಅಲ್ಲಿನ ಪರಿಸರ ಸೌಂದರ್ಯವನ್ನು ಕಣ್ತುಂಬಿಕೊಂಡರು.