ಚಿಕ್ಕಮಗಳೂರು : ಪಂಚಾಯಿತಿ ಹಣ, ಆಸ್ತಿ ದುರುಪಯೋಗ ಹಿನ್ನೆಲೆ ಗ್ರಾಮ ಪಂಚಾಯಿತಿಗೆ ಕಾಲಿಡದಂತೆ ಪಿಡಿಓಗೆ ಗ್ರಾಮ ಪಂಚಾಯಿತಿ ಸದಸ್ಯರು ಬಹಿಷ್ಕಾರ ಹಾಕಿರುವ ಘಟನೆ ಚಿಕ್ಕಮಗಳೂರು ಸಮೀಪದ ಅಲ್ಲಂಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.ಅಲ್ಲಂಪುರ ಗ್ರಾಮದ ಪಿಡಿಓ ನರಸಿಂಹಮೂರ್ತಿ ಅವರ ಬಳಿ ಗ್ರಾಮ ಪಂಚಾಯಿತಿ ಸದಸ್ಯರು ದಾಖಲೆ ಕೇಳುತ್ತಿದ್ದಂತೆ ಸ್ಥಳದಿಂದ ಪಿಡಿಓ ಜಾಗ ಖಾಲಿ ಮಾಡಲು ಮುಂದಾಗಿದ್ದು, ಗ್ರಾಮ ಪಂಚಾಯಿತಿ ಸದಸ್ಯರು ಪಿಡಿಓ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಿಡಿಓ ನನ್ನು ಹೊರಕಳಿಸಿ ಪಂಚಾಯಿತಿಗೆ ಬೀಗ ಹಾಕಿದ್ದು, ಹಣ ಕಟ್ಟಿ ಪಂಚಾಯಿತಿಗೆ ಕಾಲಿಡುವಂತೆ ಆಗ್ರಹಿಸಿದ್ದು, ಸಾಮಾನ್ಯ ಸಭೆಯಿಂದ ಸದಸ್ಯರು ಹೊರ ನಡೆದಿದ್ದಾರೆ.