ಯಡಿಯೂರಪ್ಪ ವಿರುದ್ದ ಮಾಜಿ ಸಿಎಂ ವೀರಪ್ಪ ಮೋಯ್ಲಿ ಗರಂ…

278
firstsuddi

ಚಿಕ್ಕಬಳ್ಳಾಪುರ: ಜಿಲ್ಲಾಢಳಿತ ಭವನದಲ್ಲಿ ಮಾತನಾಡಿದ ವೀರಪ್ಪ ಮೋಯ್ಲಿ ಅವರು ಯಡಿಯೂರಪ್ಪನವರು ಇಂಥ ಆಪರೇಶನ್ ಕಮಲ ಮಾಡಿ ಆ ಪಕ್ಷದಿಂದಲೇ ಬಿಟ್ರು. ಬಿಜೆಪಿ ಪಕ್ಷದ ಅವನತಿ ತಂದಿದ್ದೇ ಯಡಿಯೂರಪ್ಪ.ಅವರು ವೈಯುಕ್ತಿಕ ಅವನತಿ ಕೂಡ ತಂದುಕೊಂಡಿದ್ದಾರೆ. ಈ ಸರಿ ಆಪರೇಶನ್ ಕಮಲ ಮಾಡಿದ್ರೆ .ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಂದೆರೆಡು ಸೀಟುಗಳೂ ಬರಲ್ಲ. ಇಷ್ಟೇ ಅಲ್ಲ ಯಡಿಯೂರಪ್ಪ ರಾಜಕೀಯ ಇತಿಹಾಸ ಇಲ್ಲಿಗೆ ಮುಗಿಯುತ್ತೆ. ಸಂವಿದಾನವನ್ನ ಮುರಿದು ಮೋದಿಯವ್ರು ಏನಾದ್ರೂ ಹೋದ್ರೆ ಸಂವಿದಾನವೇ ಮೋದಿಯವರ ವಿರುದ್ದ ಹೋಗುತ್ತೆ. ಸಮ್ಮಿಶ್ರ ಸರ್ಕರವೇ ಅಲ್ಲ. ನಮ್ಮದೇ ಪಕ್ಷ ಇದ್ರೂ ಅಸಮದಾನ ಇದ್ದೇ ಇರುತ್ತೆ. ಭಿನಮತ ಸಮಾದಾನ ಪ್ರಕ್ರಿಯೆ ನಿರಂತರವಾಗಿದೆ. ಅದಕ್ಕೆ ಗಾಬರಿಯಾಗಬೇಕಾದ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ನಡೆದೇ ನಡೆಯುತ್ತೆ. ಇದರ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.