ಸಾಲಬಾಧೆಯಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ…

304

ಮಂಡ್ಯ: ಸಾಲಬಾಧೆಯಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ನಡೆದಿದೆ. ಸುಂಕಾತೊಣ್ಣೂರು ಗ್ರಾಮದ ನಂದೀಶ್ (35) ಪತ್ನಿ ಕೋಮಲಾ (28) ಮಕ್ಕಳಾದ ಚಂದನ್ (10), ಮನು (13) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು ಐದು ಲಕ್ಷ ಸಾಲ ಮಾಡಿದ್ದ ನಂದೀಶ್ ಸಹಾಯ ಕೋರಿ ಎರಡು ಬಾರಿ ಜನತಾ ದರ್ಶನದಲ್ಲಿ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನ ಆಗಿರಲಿಲ್ಲ. ದಂಪತಿಗಳು ಇಬ್ಬರು ಮಕ್ಕಳಿಗೆ ವಿಷ ಉಣಿಸಿ ಬಳಿಕ ತಾವೂ ವಿಷ ಕುಡಿದು ತಮ್ಮ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. “ನಮ್ಮೆಲ್ಲರ ಸಾವಿಗೆ ವ್ಯವಸಾಯವೇ ಕಾರಣ “ ಎಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.