ಶ್ರೀನಗರ : ಉತ್ತರ ಕಾಶ್ಮೀರದ ವಿವಿಧ ಭಾಗಗಳಲ್ಲಿ ಹಿಮಪಾತ ಸಂಭವಿಸಿ ಭಾರತೀಯ ಸೇನೆಯ ನಾಲ್ವರು ಯೋಧರು ಹುತಾತ್ಮರಾಗಿದ್ದು, 6ಮಂದಿ ನಾಗರೀಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಯೋಧರು ಎಂದಿನಂತೆ ಇಂದು ಬೆಳಿಗ್ಗೆ ಗಡಿ ನಿಯಂತ್ರಣ ರೇಖೆ ಬಳಿ ಗಸ್ತು ತಿರುಗುತ್ತಿದ್ದ ವೇಳೆ ಏಕಾಏಕಿ ಹಿಮಪಾತ ಸಂಭವಿಸಿದ್ದು, ನಾಲ್ವರು ಯೋಧರು ವೀರಮರಣ ಹೊಂದಿದ್ದಾರೆ. ಅಲ್ಲದೇ 6ಕ್ಕೂ ಹೆಚ್ಚು ಮಂದಿ ನಾಗರೀಕರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದ್ದು, ಇನ್ನೂ ಹಿಮಾಪಾತದಲ್ಲಿ ಸಿಲುಕಿಕೊಂಡಿರುವ ಯೋಧರಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.










