ಫಸ್ಟ್ ಸುದ್ದಿ- ಕುಂತಿ ಜಿಲ್ಲೆಯ ಚೋಚಾಂಗ್ ಗ್ರಾಮದಲ್ಲಿ ವಲಸೆ ಮತ್ತು ಮಾನವ ಕಳ್ಳಸಾಗಣೆ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲು ಬಂದ ಎನ್.ಜಿ. ಓ ತಂಡದ ಐದು ಮಹಿಳೆಯರಿಗೆ ದುಷ್ಕರ್ಮಿಗಳು ಬಂದೂಕು ತೋರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಕೃತ್ಯ ಜಾರ್ಖಂಡ್ ನಲ್ಲಿ ನಡೆದಿದೆ.ಗ್ರಾಮಸ್ಥರಿಗೆ ಬೀದಿನಾಟಕದ ಮೂಲಕ ಅರಿವು ಮೂಡಿಸಲು ಹನ್ನೊಂದು ಜನರ ತಂಡ ಚೋಚಾಂಗ್ ಗ್ರಾಮಕ್ಕೆ ತೆರಳಿದ್ದು, ಇವರಲ್ಲಿ ಐದು ಮಹಿಳೆಯರನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿರುವುದಾಗಿ ಉಪ ಪೊಲೀಸ್ ಮಹಾನಿರೀಕ್ಷಕ ಅಮೋಲ್ ವಿ ಹೋಮ್ಕರ್ ತಿಳಿಸಿದ್ದಾರೆ.