ಸದ್ಯದಲ್ಲೇ ಮದ್ಯ ಪ್ರಿಯರಿಗೆ ಸರ್ಕಾರದಿಂದ ಶುಭಸುದ್ದಿ…!

757
firstsuddi

ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ಭೀತಿ ಹಿನ್ನೆಲೆ, ದೇಶಾದ್ಯಂತ 21 ದಿನಗಳ ಕಾಲ ಲಾಕ್‍ಡೌನ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಆದೇಶ ಹೊರಡಿಸಿದ್ದು, ಇದರ ಪರಿಣಾಮ ವ್ಯಾಪಾರ ವಹಿವಾಟು ಸಂಪೂರ್ಣ ನೆಲಕಚ್ಚಿದ್ದು, ರಾಜ್ಯದಲ್ಲೂ ಲಾಕ್‍ಡೌನ್ ಜಾರಿಯಲ್ಲಿದ್ದು, ಮೆಡಿಕಲ್, ದಿನಸಿ, ತರಕಾರಿ ಅಂಗಡಿಗಳ ತೆರೆಯಲು ಹಾಗೂ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಆದರೆ ಲಾಕ್‍ಡೌನ್‍ನಿಂದಾಗಿ ಮದ್ಯ ಮಾರಲು ಅನುಮತಿ ಇಲ್ಲದ ಕಾರಣ ಹಲವು ಚಟಕ್ಕೆ ಬಿದ್ದ ಜನರು ರಾಜ್ಯದಲ್ಲೂ ಆತ್ಮಹತ್ಯೆಗೆ ಶರಣಾಗಿದ್ದು, ಇದರ ಮಧ್ಯೆ ಮದ್ಯ ಸಿಗದೆ ಪರದಾಡುತ್ತಿದ್ದ ಮದ್ಯ ಪ್ರಿಯರಿಗೆ ಸದ್ಯದಲ್ಲೇ ಶುಭಸುದ್ದಿ ಸಿಗಲಿದ್ದು, ಏನಾದರೂ ಏಪ್ರಿಲ್ 14ರ ಬಳಿಕವೂ ಲಾಕ್‍ಡೌನ್ ಮುಂದುವರೆದರೆ ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮದ್ಯದಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದ್ದು, ರಾಜ್ಯ ಸರ್ಕಾರಕ್ಕೆ ಪ್ರಮುಖ ಆದಾಯ ಮೂಲವಾಗಿರುವ ಮದ್ಯ ಮಾರಾಟ ನಿಷೇಧದಿಂದ ಕೋಟ್ಯಾಂತರ ರೂ. ಸರ್ಕಾರಕ್ಕೆ ನಷ್ಟವಾದ ಹಿನ್ನೆಲೆ, ದಿನಕ್ಕೆ ಮೂರು ಗಂಟೆ ಮದ್ಯ ಮಾರಾಟಕ್ಕೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದ್ದು, ಏಪ್ರಿಲ್ 14ರ ಬಳಿಕವೂ ಲಾಕ್‍ಡೌನ್ ಮುಂದುವರೆದರೆ ಮಾತ್ರ ಮದ್ಯದ ಅಂಗಡಿ ತೆರೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.