ಭೀಕರ ಮಳೆಯಿಂದಾಗಿ ಕೇರಳ ಪ್ರವಾಸೋದ್ಯಮ ಕ್ಕೆ ಭಾರಿ ನಷ್ಟ…

856
firstsuddi

ಕೇರಳ- ಕೇರಳ ಪ್ರವಾಸೋದ್ಯಮ ಇಲಾಖೆ ನಿದೇಶಕರಾದ ಪಿ. ಬಾಲಕಿರಣ್ ಮಾತನಾಡಿ ರಾಜ್ಯದಲ್ಲಿ ಮಹಾಮಳೆ ಪರಿಣಾಮವಾಗಿ ಪ್ರವಾಸೋದ್ಯಮದಲ್ಲಿ ಅತಿ ಹೆಚ್ಚು ಆದಾಯಗಳಿಸುತ್ತಿದ್ದ, ಕೇರಳ ರಾಜ್ಯಕ್ಕೆ ಈ ಬಾರಿಯ ಬಾರಿ ಮಳೆಯಿಂದ ಪ್ರವಾಸೋದ್ಯಮ ಇಲಾಖೆ ನಷ್ಟ ಅನುಭವಿಸಿದ್ದು,ಪ್ರವಾಸೋದ್ಯಮಕ್ಕೆ ಅತೀವೃಷ್ಟಿಯಿಂದ ಸುಮಾರು 2100 ಕೋಟಿ ನಷ್ಟ ಆಗಿದ್ದು, ಇದು ಕೇವಲ ಪ್ರಾಥಮಿಕ ಲೆಕ್ಕಚಾರ, ಮುನ್ನಾರ್ ಮತ್ತು ಆಲಪುಳ ಹಿನ್ನೀರು ಪ್ರದೇಶಗಳು ಪ್ರವಾಹಕ್ಕೆ ಹೆಚ್ಚು ಹಾನಿಗೊಳಗಾಗಿದ್ದು,ಕೇರಳದಲ್ಲಿ ಅಕ್ಟೋಬರ್ ನಿಂದ ಡಿಸೆಂಬರ್ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಆದರೆ ಪ್ರವಾಹದಿಂದ ಯಾವುದೇ ಬುಕ್ಕಿಂಗ್ ಆಗದ ಪರಿಣಾಮ ಪ್ರವಾಸೋದ್ಯಮ ಇಲಾಖೆ ನಷ್ಟ ಅನುಭವಿಸಿದೆ ಎಂದಿದ್ದಾರೆ.