ಯಾಕ್ರೀ ಈ ರೀತಿಯ ಪಾತ್ರಗಳನ್ನು ಮಾಡಿ ಜನರ ಮನಸ್ಸು ಹಾಳು ಮಾಡುತ್ತೀರಾ?-ರಚಿತಾ ರಾಮ್ ವಿರುದ್ಧ ಹುಚ್ಚ ವೆಂಕಟ್ ಆಕ್ರೋಶ…

376

ಬೆಂಗಳೂರು : ಸ್ಯಾಂಡಲ್‍ವುಡ್‍ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಮ್ಮ ಹೊಸ ಚಿತ್ರ ಏಕ್ ಲವ್ ಯಾ ಸಿನಿಮಾದಲ್ಲಿ ಮತ್ತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ರಚಿತಾ ರಾಮ್ ವಿರುದ್ಧ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಏಕ್ ಲವ್ ಯಾ” ಸಿನಿಮಾದ ಟ್ರೈಲರ್ ನ್ನು ಪ್ರೇಮಿಗಳ ದಿನದಂದು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಟ್ರೈಲರ್ ವಿಚಾರವಾಗಿ ಮಾತನಾಡಿರುವ ಹುಚ್ಚ ವೆಂಕಟ್ ಅವರು, ವೀಡಿಯೋ ಮಾಡುವ ಮೂಲಕ ರಚಿತಾ ರಾಮ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವೀಡಿಯೋದಲ್ಲಿ, ನನ್ ಮಗಂದ್ ಡೈಲಾಗ್…ಇದು ರಚಿತಾ ರಾಮ್ ಅವರಿಗೆ ಹೇಳುತ್ತಿರುವುದು. ಯಾಕ್ರೀ ಯಾಕ್ರೀ ಈ ರೀತಿಯ ಪಾತ್ರಗಳನ್ನು ಮಾಡಿ ಜನರ ಮನಸ್ಸು ಹಾಳು ಮಾಡುತ್ತೀರಾ? ನೀವು ಮಾಡಿರುವುದು ಏನು? ಸಿಗರೇಟ್ ಸೇದುವುದಂತೆ, ಲಿಪ್ ಕಿಸ್ ಅಂತೆ.. ಇದರಿಂದ ಏನಾಗುತ್ತೆ? ಮಕ್ಕಳಿಂದ ಹಿಡಿದು ಹೆಣ್ಣು ಮಕ್ಕಳು ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡೋಕಾಗುತ್ತಾ? ಹೆಣ್ಣು ಮಕ್ಕಳಿಗೆ ಮುಜುಗರ ಆಗುವುದಿಲ್ಲವಾ? ಡೈರೆಕ್ಟರ್ ಕೊಟ್ರೂ ಅದಕ್ಕೆ ಮಾಡಿದ್ವಿ ಎಂದು ಎಲ್ಲವನ್ನೂ ಡೈರೆಕ್ಟರ್ ಮೇಲೆ ಹಾಕ್ತೀರಾ. ನಿಮಗೆ ಇಷ್ಟವಿಲ್ಲ ಅಂದರೆ ಡೈರೆಕ್ಟರ್ ಬಲವಂತ ಮಾಡಲು ಸಾಧ್ಯವಿಲ್ಲ. ಯಾಕ್ ಈ ಥರಾ ಮಾಡ್ತೀರಾ? ಕಳೆದ ಸಿನಿಮಾದಲ್ಲೂ ಹೀಗೆ ಮಾಡಿದ್ರಿ. ಈ ಸಿನಿಮಾದಲ್ಲೂ ಮಾಡಿದ್ದೀರಾ. ನಿಮ್ಮ ಪ್ರತಿಭೆಯನ್ನು ತೋರಿಸೋಕೆ ಬೇರೆ ದಾರಿ ಇಲ್ವಾ? ನಿಮಗೆ ಪ್ರತಿಭೆ ಇದ್ದರೆ ಬೇರೆ ಕಡೆಗೆ ತೋರಿಸಿ. ಹೀಗೆ ಮಾಡೋದನ್ನು ಪ್ರತಿಭೆ ಅಂತರಾ? ನನ್ ಮಗಂದ್ ತೂ.
ಇದರಿಂದ ಎಷ್ಟು ಜನ ಹಾಳಾಗುತ್ತಾರೆ ಎಂದು ನಿಮಗೆ ಗೊತ್ತಾ? ಒಂದು ಗಂಡಸು ಡ್ರಿಂಕ್ಸ್ ಮಾಡಿ ಸಿಗರೇಟ್ ಸೇದಿದರೇನೆ ತಪ್ಪು. ಅಂತಹದರಲ್ಲಿ ನೀವು ಸಿಗರೇಟ್ ಸೇದುವುದು ಮತ್ತು ಲಿಪ್ ಕಿಸ್ ಮಾಡುವುದೆಂದರೆ ಏನು ಅರ್ಥ? ಇಲ್ಯಾರೂ ಕೇಳುವವರು ಇಲ್ವಾ? ಇದರಿಂದ ನಿಮ್ಮ ಮನೆಯಲ್ಲಿನ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ನೋವು ಅನುಭವಿಸುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ. ಈ ಹಿಂದೆ ಕನ್ನಡ ಇಂಡಸ್ಟ್ರಿ ಅಂದರೆ ಹೇಗಿತ್ತು? ಕನ್ನಡ ಇಂಸ್ಟ್ರಿ ಅಂದ್ರೆ ಒಂದೇ ಒಂದು ಅಶ್ಲೀಲ ಇಲ್ಲ ಎನ್ನುವಂತಿತ್ತು. ಇವತ್ತು ಏನೆಲ್ಲಾ ಆಗಿದೆ ನೋಡಿ. ಪ್ರೇಮ್ ನಿನಗೆ ಇದು ಬೇಕಿತ್ತಾ? ಈ ರೀತಿಯ ಶಾಟ್ ಇಡೋದು ಬೇಕಿತ್ತಾ? ಇದ್ರಿಂದ ನೀನು ಜನರಿಗೆ ತೋರಿಸೋದಾದ್ರೂ ಏನು? ಆ ದೃಶ್ಯವನ್ನು ತೆಗೆದು ಹಾಕು.
ರಚಿತಾ ರಾಮ್ ಅವ್ರೆ ನಾಳೆ ನೀವು ಮದ್ವೆ ಆಗ್ಬೇಕು. ನಿಮ್ಮ ಗಂಡ ಇದನ್ನ ನೋಡಬೇಕು. ನೋಡಿ ನಿಮಗೇನ್ ಅಂತಾನೆ. ಬೇಶ್ ಎನ್ನುತ್ತಾನಾ? ಚಿಕ್ಕ ಕಾರಣ ಸಿಕ್ರೆ ಸಾಕು ಡಿವೋರ್ಸ್ ಕೊಡ್ತಾರೆ. ಅಂಥ್ರದಲ್ಲಿ ನೋಡಿ ನೀವು ಏನ್ ಮಾಡ್ತಾ ಇದ್ದೀರಾ? ಸಿನಿಮಾ ರಂಗವೇ ನಿಮಗೆ ಕೊನೆಯಲ್ಲ. ನೀವು ಮದ್ವೆ ಆಗ್ಬೇಕು, ತಾಯಿ ಆಗಬೇಕು ನೆನಪಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.