ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನ…

409
firstsuddi

ಕಲಬುರಗಿ : ದೇವಸ್ಥಾನಕ್ಕೆ ಬಂದಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲು ಪ್ರಯತ್ನಿಸಿದ ಯುವಕನೊಬ್ಬನಿಗೆ ಗ್ರಾಮಸ್ಥರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಕಲಬುರಗಿಯ ಗೋವಾ ಹೋಟೆಲ್ ಬಳಿ ನಡೆದಿದೆ. ಯುವಕ ಇಂದು ಬೆಳಿಗ್ಗೆ ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಾಲಯಕ್ಕೆ ತನ್ನ ಪೋಷಕರೊಂದಿಗೆ ಬಂದಿದ್ದ 5 ವರ್ಷದ ಬಾಲಕಿಯನ್ನು ಅಪಹರಿಸಿ ಪಕ್ಕದ ಕಾಂಪ್ಲೆಕ್ಸ್ ಗೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದು, ಈ ವೇಳೆ ಬಾಲಕಿ ಕೂಗಾಡಿದ್ದಾಳೆ. ಭಾಲಕಿಯ ಚೀರಾಟ ಕೇಳಿದ ಸ್ಥಳೀಯರು ಕೂಡಲೇ ಕಟ್ಟಡದ ಒಳಗೆ ತೆರಳಿ ಬಾಲಕಿಯನ್ನು ರಕ್ಷಿಸಿ ಯುವಕನನ್ನು ಕರೆಂಟ್ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಬಳಿಕ ಬ್ರಹ್ಮಪುರ ಠಾಣೆಗೆ ಕರೆ ಮಾಡಿ ಘಟನೆಯ ವಿವರವನ್ನು ತಿಳಿಸಿ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.