ಖಾಸಗಿ ಬಸ್-ಟಾಟಾ ಏಸ್ ನಡುವೆ ಡಿಕ್ಕಿ-ಮೂವರು ಸ್ಥಳದಲ್ಲೇ ಸಾವು…

174
firstsuddi

ಶಿವಮೊಗ್ಗ : ಖಾಸಗಿ ಬಸ್ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿಯಾಗಿ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿಖಾರಿಪುರದಲ್ಲಿ ನಡೆದಿದೆ. ಚಂದ್ರಕಲಾ(40), ಲಕ್ಷ್ಮೀ(40) ಹಾಗೂ ರೇಖಾ(45) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ಮೂವರು ಮಹಿಳೆಯರು ಟಾಟಾ ಏಸ್‍ನಲ್ಲಿ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತದ ರಭಸಕ್ಕೆ ಬಸ್‍ನ ಮುಂಭಾಗದ ಗಾಜು ಸಂಪೂರ್ಣ ಪುಡಿ ಪುಡಿಯಾಗಿದ್ದು, ಘಟನೆ ಶಿಖಾರಿಪುರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.