ದೇವೇಗೌಡರ ಕುಟುಂಬಕ್ಕೆ ನನ್ನ ಬೆಂಬಲ ಇರುವುದಿಲ್ಲ : ಎ ಮಂಜು…

343
firstsuddi

ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಹಣ್ಯಾಳು ಗ್ರಾಮದಲ್ಲಿ ಮಾತನಾಡಿದ ಎ. ಮಂಜು ಅವರು ನಾನು ಹೆಚ್.ಡಿ ದೇವೇಗೌಡರ ಕುಟುಂಬವನ್ನು ವಿರೋಧಿಸಿಕೊಂಡು ಬಂದವನು. ಈಗಲೂ ನಾನು ದೇವೇಗೌಡರ ಕುಟುಂಬವನ್ನು ವಿರೋಧಿಸುತ್ತೇನೆ.ಜೆಡಿಎಸ್ ಜೊತೆ ಮೈತ್ರಿಯನ್ನು ನೇರವಾಗಿಯೇ ವಿರೋಧಿಸಿಕೊಂಡು ಬಂದಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ.ಕಾರ್ಯಕರ್ತರ ಕೂಗು ಆಗಿದೆ. ನಾನು ನನ್ನ ಕಾರ್ಯಕರ್ತರನ್ನು ಉಳಿಸಬೇಕಿದೆ. ದೇವೇಗೌಡರ ಕುಟುಂಬಕ್ಕೆ ನನ್ನ ಬೆಂಬಲ ಇರುವುದಿಲ್ಲ ಎಂದಿದ್ದಾರೆ.