ನನಗೂ ಉಪಮುಖ್ಯಮಂತ್ರಿ ಆಗುವ ಆಸೆ ಇದೆ : ಸಚಿವ ಬಿ. ಶ್ರೀ ರಾಮುಲು.

338
firstsuddi

ದಾವಣಗೆರೆ : ನನಗೂ ಉಪಮುಖ್ಯಮಂತ್ರಿ ಆಗುವ ಆಸೆ ಇದೆ. ಆದರೆ ಯಡಿಯೂರಪ್ಪ ಅವರಿಗೆ ಮುಜುಗರ ತರುವಂತಹ ಕೆಲಸ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಉಪಮುಖ್ಯಮಂತ್ರಿ ಆಗುವ ಆಸೆ ಇದೆ. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಅವರಿಗೆ ಮುಜುಗರ ತರುವಂತಹ ಕೆಲಸ ನಾನು ಮಾಡುವುದಿಲ್ಲ. ನನಗೆ ಉಪಮುಖ್ಯಮಂತ್ರಿಯಾಗುವ ಅವಕಾಶ ಮುಂದೆ ಬರುತ್ತದೆ. ಯಡಿಯೂರಪ್ಪ ಅವರು ಕೊಟ್ಟ ಮಾತನ್ನೂ ಎಂದಿಗೂ ತಪ್ಪುವುದಿಲ್ಲ. ಹಾಗೆಯೇ ವಾಲ್ಮೀಕಿ ಸಮುದಾಯಕ್ಕೂ ಖಂಡಿತ ನ್ಯಾಯ ಒದಗಿಸುತ್ತಾರೆ ಎಂದರು.