ಐಪಿಎಸ್​​ ಅಧಿಕಾರಿ ಮಧುಕರ್​ ಶೆಟ್ಟಿ ವಿಧಿವಶ…

208
firstsuddi

ಬೆಂಗಳೂರು:ಹೆಚ್1ಎನ್1 ಖಾಯಿಲೆಯಿಂದ ಬಳಲುತ್ತಿದ್ದ ಐಪಿಎಸ್ ಅಧಿಕಾರಿ  ಮಧುಕರ್ ಶೆಟ್ಟಿ (47) ಅವರು  ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ 8.30ರ  ಸುಮಾರಿಗೆ  ಕೊನೆಯುಸಿರೆಳೆದಿದ್ದಾರೆ.  ಮೂಲತಃ ಉಡುಪಿ ಜಿಲ್ಲೆಯವರಾದ ಮಧುಕರ್ ಶೆಟ್ಟಿ ಅವರು  ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಪುತ್ರ.ಮಧುಕರ್ ಶೆಟ್ಟಿ ಅವರು ದೆಹಲಿಯ  ಜೆಎನ್​ಯುು ವಿಶ್ವ ವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂಎ ಪದವಿ ಮುಗಿಸಿದ್ದರು. 1999ರ ಬ್ಯಾಚ್​ನ ಐಪಿಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ ಎಸ್​ಪಿಯಾಗಿ ಕಾರ್ಯನಿರ್ವಹಿಸಿದ್ದರು.