ಶಿವಮೊಗ್ಗ: ಮಗನ ಸಾವೇ ಸಿದ್ದರಾಮಯ್ಯ ಅವರಿಗೆ ಶಿಕ್ಷೆ ಎಂಬ ಜನಾರ್ಧನ ರೆಡ್ಡಿ ಅವರ ಹೇಳಿಕೆಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಜನಾರ್ದನ ರೆಡ್ಡಿ ಅವರಿಗೆ ಸಂಸ್ಕೃತಿ ಇಲ್ಲ. ಮನುಷ್ಯತ್ವವೂ ಇಲ್ಲ. ರಾಜಕಾರಣದಲ್ಲಿ ಟೀಕೆಗಳು ಇರುತ್ತವೆ. ಆದರೆ ಕುಟುಂಬದ ವಿಚಾರ ಮಾತನಾಡುವುದು ಸರಿಯಲ್ಲ. ಜನಾರ್ದನ ರೆಡ್ಡಿ ಏನು ರಾಜಮನೆತನದಿಂದ ಬಂದವರಾ? ನೂರಾರು ಕೋಟಿ ಹಣ ಖರ್ಚು ಮಾಡಿ ಮಗಳ ಮದುವೆ ಮಾಡಿದ್ದಾರೆ.ಹಣ ಎಲ್ಲಿಂದ ಬಂತು? 40 ವರ್ಷಗಳಿಂದ ಮೈಸೂರಿನಲ್ಲಿ ನನಗೆ ಒಂದು ಮನೆ ಕಟ್ಟಲು ಸಾಧ್ಯವಾಗಿಲ್ಲ. ಜನಾರ್ದನ ರೆಡ್ಡಿಯನ್ನು ಜೈಲಿಗೆ ಕಳುಹಿಸಿದ್ದು ನಾನಲ್ಲ. ನಾನು ಹೇಳಿದ ತಕ್ಷಣ ನ್ಯಾಯಮೂರ್ತಿ ಜೈಲಿಗೆ ಕಳುಹಿಸಿಲ್ಲ. ಲೂಟಿ ಮಾಡದೇ ಜೈಲಿಗೆ ಕಳುಹಿಸುತ್ತಾರಾ? ರೆಡ್ಡಿ ಕ್ರಿಮಿನಲ್ ಬ್ರೈನ್ ಇರುವ ಮನುಷ್ಯ ಎಂದಿದ್ದಾರೆ.