ಮೂಡಿಗೆರೆ : ಧನ್ಯಶ್ರೀ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕು, ತಲೆಮರೆಸಿಕೊಂಡಿರೋ ಆರೋಪಿಗಳು ಹಾಗೂ ವಾಟ್ಸಾಪ್‍ನಲ್ಲಿ ಧನ್ಯಶ್ರೀ ಮಾಡಿದ ಮೆಸೇಜ್‍ಗಳನ್ನ ಹರಿಬಿಟ್ಟ ಸಂತೋಷ್‍ನನ್ನ ಕೂಡಲೇ ಬಂಧಿಸಬೇಕೆಂದು ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಆಗ್ರಹಿಸಿದ್ದಾರೆ. ಜೆಡಿಎಸ್ ವತಿಯಿಂದ ಮೂಡಿಗೆರೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಪ್ರವಾಸಿಮಂದಿರದಿಂದ ಹೊರಟು ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿ ತಹಶೀಲ್ದಾರ್ ಕಚೇರಿ ತಲುಪಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದ್ರು. ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಧನ್ಯಶ್ರೀ ಸಾವಿಗೆ ಕಾರಣಕರ್ತರಾದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಜೊತೆಗೆ, ನೈತಿಕ ಪೊಲೀಸ್ ಗಿರಿಯಡಿ ಮೂಡಿಗೆರೆ ಯುವತಿಯರಿಗೆ ಅನ್ಯಕೋಮಿನ ಯುವಕರ ಜೊತೆ ಓಡಾಡಿದ್ರೆ ಧರ್ಮದೇಟು ಗ್ಯಾರಂಟಿ ಎಂದು ಸಂದೇಶ ರವಾನಿಸಿರೋರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.