ಕಡೂರು :ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಎತ್ತಿನ ಗಾಡಿ ಪಲ್ಟಿ,ಇಬ್ಬರಿಗೆ ಗಂಭೀರ ಗಾಯ…

327

ಚಿಕ್ಕಮಗಳೂರು : ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಎತ್ತಿನ ಗಾಡಿ ಪಲ್ಟಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ನಡೆದಿದೆ. ಅಂತರಘಟ್ಟಮ್ಮ ಜಾತ್ರಾಮಹೋತ್ಸವದ ಅಂಗವಾಗಿ ಅಯೋಜಿಸಿದ್ದ ಎತ್ತಿನಗಾಡಿ ಸ್ಪರ್ಧೆಯಲ್ಲಿ ತಿರುವಿನಲ್ಲಿ ಎತ್ತಿನ ಗಾಡಿ ಪಲ್ಟಿಯಾಗಿದ್ದು, ತಿಮ್ಮಯ್ಯ, ಚಂದ್ರೋಜಿರಾವ್ ಎಂಬುವರು ಎತ್ತಿನ ಗಾಡಿ ಕೆಳಗೆ ಸಿಲುಕಿಕೊಂಡಿದ್ದು, ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.