ಹಾಸನ: ಆಪರೇಷನ್ ಕಮಲ ಆಡಿಯೋ ಬಹಿರಂಗವಾಗಿದ್ದು, ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಎಚ್.ಡಿ. ದೇವೇಗೌಡರ ಬಗ್ಗೆ ನೀಡಿರುವ ಹೇಳಿಕೆಗೆ ಜೆಡಿಎಸ್ ಕಾರ್ಯಕರ್ತರು ಪ್ರೀತಂಗೌಡ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು, ಈ ವೇಳೆ ಜೆಡಿಎಸ್ ಕಾರ್ಯಕರ್ತರು ಪ್ರೀತಂಗೌಡ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಮನೆಯೊಳಗೆ ನಿಂತಿದ್ದ ಪ್ರೀತಂಗೌಡ ಅವರ ಬೆಂಬಲಿಗರೊಬ್ಬರು ಗಾಯಗೊಂಡಿದ್ದಾರೆ.










