ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ಮೇ 3ರ ವರೆಗೆ ಲಾಕ್ಡೌನ್ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿದ್ದು, ಈ ನಡುವೆ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಬಹುತೇಕ ಹಳೆಯ ಮಾರ್ಗಸೂಚಿಗಳನ್ನು ಪಾಲಿಸಲು ಸೂಚನೆ ನೀಡಿದ್ದು, ಲಾಕ್ಡೌನ್-2ರಲ್ಲಿ ಏನೆಲ್ಲಾ ಇರುತ್ತದೆ, ಏನೆಲ್ಲಾ ಇರುವುದಿಲ್ಲ ಎಂಬುವುದರ ಬಗ್ಗೆ ಮಾಹಿತಿ ಈ ಕೆಳಕಂಡತಿವೆ.
1 ಯಾರಾದರು ನಿಧನರಾದರೆ 20ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ.
2 ಮದುವೆ ಹಾಗೂ ಹಲವು ಸಮಾರಂಭಗಳಿಗೆ ಜಿಲ್ಲಾಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯ.
3 ಯಾರೂ ಕೂಡಾ ಗುಟ್ಕಾ, ತಂಬಾಕು, ಬಳಸುವಂತಿಲ್ಲ.
4 5ಕ್ಕಿಂತ ಹೆಚ್ಚು ಮಂದಿ ಗುಂಪುಗೂಡುವಂತಿಲ್ಲ.
5 ಕೆಲಸ ಮಾಡುವಂತಹ ಸ್ಥಳಗಳಲ್ಲಿ 6 ಅಡಿ ಅಂತರವಿರಬೇಕು.
6 ದಿನಸಿ ಅಂಗಡಿ, ಹಣ್ಣು, ತರಕಾರಿ ಲಭ್ಯವಿರುತ್ತದೆ.
7 ಮೇ 3ರ ವರೆಗೆ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ.
8 ರಸಗೊಬ್ಬರ, ಕ್ರಿಮಿನಾಶಕ ಅಂಗಡಿಗಳಿಗೆ ಅವಕಾಶ.
9 ರಕ್ಷಣೆ, ಕೇಂದ್ರ, ರಾಜ್ಯ ಪೊಲೀಸ್ ಪಡೆಗೆ ವಿನಾಯಿತಿ.
10 ಎಟಿಎಂ, ಬ್ಯಾಂಕ್, ನೀರು, ಪೋಸ್ಟ್, ವಿದ್ಯುತ್, ಎಲ್ಪಿಜಿ ಆಫಿಸ್ಗಳಿಗೆ ಅವಕಾಶ.
11 ಬಸ್, ರೈಲು, ವಿಮಾನ ಸಂಚಾರದ ನಿರ್ಬಂಧ ಮೇ. 3ರ ವರೆಗೆ ಮುಂದುವರಿಕೆ.
12 ಸ್ಥಳೀಯ ಸಂಸ್ಥೆಗಳ ಅಗತ್ಯ ಸೇವೆಗಳಿಗೆ ವಿನಾಯಿತಿ.
13 ಮಾಸ್ಕ್ ಧರಿಸದೇ ಓಡಾಡಿದರೆ ದಂಡ, ಶಿಕ್ಷೆ ಸಾಧ್ಯತೆ.
14 ಪತ್ರಿಕೆ, ವಿದ್ಯನ್ಮಾನ ಮಾಧ್ಯಮ, ಇಂಟರ್ನೆಟ್ ವ್ಯವಸ್ಥೆ ಎಂದಿನಂತೆ ಇರಲಿದೆ.
15 ವೈದ್ಯಕೀಯ, ಆಹಾರ ಪೂರೈಸುವ ಇ-ಕಾಮರ್ಸ್ ಗಳಿಗೆ ಅವಕಾಶ.
16 ಸರ್ಕಾರದ ಲೈಸ್ಸೆನ್ಸ್ ಹೊಂದಿರುವ ಕೃಷಿ ಉತ್ಪನ್ನ ಮಂಡಿಗಳಿಗೆ ಅವಕಾಶ.
17 ಪೆಟ್ರೋಲ್ ಬಂಕ್, ಷೇರುಪೇಟೆ, ಶೀತಲಿಕರಣ ಘಟಕಗಳಿಗೆ ರಿಲೀಫ್.
18 ತುರ್ತು ಸೇವೆಯಲ್ಲಿ ಇರುವವರ ಬಳಕೆಗೆ ಹೋಟೆಲ್, ಲಾಡ್ಜ್ ವ್ಯವಸ್ಥೆ.
19 ರೈತರು, ಕೂಲಿ ಕಾರ್ಮಿಕರಿಗೆ ಸ್ವಲ್ಪ ರಿಯಾಯಿತಿ.
20 ಕೃಷಿ ಚಟುವಟಿಕೆ, ಕೃಷಿ ಉತ್ಪನ್ನಗಳ ಸಾಗಣೆಗೆ ಅವಕಾಶ.
21 ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ.
22 ಹೆದ್ದಾರಿ, ರೈಲುಗಳಲ್ಲಿ ಅಗತ್ಯ ವಸ್ತುಗಳ ಸಾಗಣೆಗೆ ಅವಕಾಶ
ಈ ಮೇಲಿನ ಎಲ್ಲಾ ಮಾರ್ಗಸೂಚಿಗಳು ಕೊರೊನಾ ಹಾಟ್ಸ್ಪಾಟ್ ಗಳಿಗೆ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.










