ಮಹದಾಯಿ ಅಧಿಸೂಚನೆ-ಇದು ಬಿಎಸ್‍ವೈ ರವರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಜನ್ಮದಿನದ ಉಡುಗೊರೆ : ಬಿ.ವೈ ವಿಜಯೇಂದ್ರ ಟ್ವೀಟ್.

205
firstsuddi

ಬೆಂಗಳೂರು : ಮಹದಾಯಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನಕ್ಕೆ ನೀಡಿದ ಉಡುಗೊರೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ. ವೈ ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದಾರೆ. ಟ್ವೀಟ್‍ನಲ್ಲಿ “ರಾಜ್ಯದ ಮನವಿಗೆ ಓಗೊಟ್ಟು ರೈತಪರ, ಉತ್ತರ ಕರ್ನಾಟಕದ ಅಭಿವೃದ್ಧಿ ಪರ ಸದಾ ಚಿಂತಿಸುವ ಮುಖ್ಯಮಂತ್ರಿಗಳ ಜನ್ಮದಿನಂದಂದೇ ಮಹದಾಯಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನಾ ಪೂರ್ವಕ ಕೃತಜ್ಞತೆಗಳು. ಇದು ಬಿ.ಎಸ್. ಯಡಿಯೂರಪ್ಪ ರವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಜನ್ಮದಿನದ ಉಡುಗೊರೆ. ಇನ್ನೇನಿದ್ದರೂ ಯೋಜನೆಯ ಅನುಷ್ಠಾನ, ರೈತರ ಕನಸಿನ ಸಾಕಾರ” ಎಂದು ಟ್ವೀಟ್ ಮಾಡಿದ್ದಾರೆ.