ನಾವು ಬಿಜೆಪಿಯವರನ್ನು ಆಪರೇಶನ್ ಮಾಡಲು ಹೋಗೋದೇ ಇಲ್ಲ: ಕೆ.ಜೆ.ಜಾರ್ಜ್…

255
firstsuddi

ಚಿಕ್ಕಮಗಳೂರು : ಮೈತ್ರಿಗೆ ಜಯ ಬಂದೇ ಬರುತ್ತೆ ಎಂದು ಸಚಿವ ಕೆ.ಜೆ.ಜಾರ್ಜ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದು, ಬಿಜೆಪಿಯವರಿಗೆ ಕೆಲ ಜಾಗದಲ್ಲಿ ಕ್ಯಾಂಡೇಟ್ ಗಳೇ ಇಲ್ಲ. ಮಂಡ್ಯದಲ್ಲಿ ಸರ್ಕಾರಿ ಕೆಲಸದಲ್ಲಿ ಇರುವವರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ನಾವು ಬಿಜೆಪಿಯವರನ್ನು ಆಪರೇಶನ್ ಮಾಡಲು ಹೋಗೋದೇ ಇಲ್ಲ. ಕಾಂಗ್ರೆಸ್ ಪಕ್ಷದವರನ್ನೇ ಬಿಜೆಪಿಯವರು ಆಪರೇಶನ್ ಮಾಡಿದ್ದರು. ಆದರೆ ಅವರು ಕೂಡ ಸ್ವಲ್ಪ ದಿನವಿದ್ದು ಕಷ್ಟವಾಗುತ್ತೆಂದು ಎಂದು ಮತ್ತೆ ವಾಪಸ್ ಬಂದಿದ್ದಾರೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.