ನಾರಾಯಣ ನೇತ್ರಾಲಯಕ್ಕೆ ಶಾಸಕ ಆನಂದ್‍ಸಿಂಗ್ ಶಿಫ್ಟ್…

232
firstsuddi

ಬೆಂಗಳೂರು:  ಶಾಸಕ ಆನಂದ ಸಿಂಗ್ ಅವರ ಮೇಲೆ ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಮೇಲೆ ಎಫ್‍ಐಆರ್ ದಾಖಲಾಗುತ್ತಿದ್ದಂತೆ ಗಣೇಶ್ ಅವರು ಕಣ್ಮರೆಯಾಗಿದ್ದಾರೆ. ಅಪೊಲೋ ಆಸ್ಪತ್ರೆಯಲ್ಲಿರುವ ಆನಂದ್ ಸಿಂಗ್ ಅವರು ಗಣೇಶ್ ಅವರು ಹಲ್ಲೆ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಿಡದಿ ಪೋಲೀಸರು ಗಣೇಶ್ ಅವರ ಪತ್ತೆಗಾಗಿ ಪೋಲೀಸ್ ರು ಶೋಧ ನಡೆಸುತ್ತಿದ್ದು, ಗಣೇಶ್ ಅವರ ಪತ್ತೆಗಾಗಿ ಆರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ. ಆನಂದ್​ಸಿಂಗ್​ ಅವರ ಕಣ್ಣಿಗೆ ತೀವ್ರ ಪೆಟ್ಟಾಗಿರುವ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಆಂಬ್ಯುಲೆನ್ಸ್​​ ಮೂಲಕ  ಇಂದು ಆನಂದ್​ಸಿಂಗ್​ ಅವರನ್ನು ನಾರಾಯಣ ನೇತ್ರಾಲಯಕ್ಕೆ ಕರೆದೊಯ್ಯಲಾಗಿದೆ.