ಅಮೇರಿಕಾದಲ್ಲಿ ಕೊರೊನಾ ಅಟ್ಟಹಾಸ-26 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿ…

195
firstsuddi

ನ್ಯೂಯಾರ್ಕ್ : ಮಹಾಮಾರಿ ಕೊರೊನಾ ವೈರಸ್ ಅಮೇರಿಕಾದಲ್ಲಿ ದೊಡ್ಡ ಮಟ್ಟದಲ್ಲೇ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಈವರೆಗೆ ಅಮೆರಿಕಾದಲ್ಲಿ 26 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, 6ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಸೋಂಕು ತಗುಲಿದೆ. ಈ ಮಹಾಮಾರಿ ಚೀನಾದಿಂದ ಆರಂಭವಾಗಿದ್ದರೂ ಚೀನಾಕ್ಕಿಂತ ಹೆಚ್ಚು ಸಾವು ನೋವುಗಳು ಅಮೇರಿಕಾ, ಇಟಲಿ, ಸ್ಪೇನ್‍ಗಳಲ್ಲಿ ಹೆಚ್ಚಾಗಿವೆ. ಆಘಾತಕಾರಿ ಸಂಗತಿಯೆಂದರೆ ಅಮೇರಿಕಾದ ನ್ಯೂಯಾರ್ಕ್ ನಗರವೊಂದರಲ್ಲೇ 10 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 2.04. ಲಕ್ಷಕ್ಕೆ ಏರಿಕೆಯಾಗಿದೆ. ನ್ಯೂಜೆರ್ಸಿ-69000 ಮಂದಿಯಲ್ಲಿ ಸೋಂಕು ತಗುಲಿದ್ದು, ಪೆನ್ಸಿಲ್ವೇನಿಯಾ, ಇಲಿನೋಯ್ಸ್, ಲೂಸಿಯಾನ, ಮಸಾಚುಸೆಟ್ಸ್, ಕ್ಯಾಲಿಫೋರ್ನಿಯಾ ಹಾಗೂ ಮಿಚಿಗನ್ ನಲ್ಲಿ 22 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಈ ಮೂಲಕ ದೇಶಾದ್ಯಂತ 6 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.