ಮೂಡಿಗೆರೆ: ನಿನ್ನೆ ಪಟ್ಟಣದ ಹೊಯ್ಸಳ ಕ್ರೀಡಾಂಗಣ ಹಾಗೂ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರಾಟೆಯ ಕಲರ್ ಬೆಲ್ಟ್ ಪರೀಕ್ಷೆಯನ್ನು ನಡೆಸಲಾಯಿತು. ಕರಾಟೆ ಪಟುಗಳಿಗೆ ಪರೀಕ್ಷೆ ನಡೆಸಲು ಕೇರಳದ ಕ್ಯಾಲಿಕಟ್ ನಿಂದ IATM ಅಧ್ಯಕ್ಷರಾದ ರೆಂಶಿ ಸುಧಾಕರನ್, ಸೆನ್ ಸಾಯಿಗಳಾದ ಸಾಗರ್, ಅರ್ಜುನ್, ವಿನೀತ್ ಆಗಮಿಸಿ ಪರೀಕ್ಷೆಯನ್ನು ನಡೆಸಿದರು. ಪರೀಕ್ಷೆಗೆ ವಿವಿಧ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮೂಡಿಗೆರೆ ಕರಾಟೆ ಮುಖ್ಯ ಶಿಕ್ಷಕ ಸೆನ್ ಸಾಯಿಗಳಾದ ರಾಜೇಂದ್ರನ್, ಲತಾಚಂದ್ರು, ಪೂಜಿತ್, ಹಾಗೂ ರಾಕಿನ್ ಖಾನ್, ಸಹ ಶಿಕ್ಷಕರಾದ ಅಶ್ವಿನಿ ರವರಲ್ಲಿ ತರಬೇತಿ ಪಡೆದ 105 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಅತಿ ಹೆಚ್ಚು ಅಂಕಗಳಿಸಿ ಡಬಲ್ ಪ್ರಮೋಷನ್ ನನ್ನು ಬೆಥನಿ ಶಾಲೆಯ ಕಾರ್ತಿಕ್ ಕೆ, ಬ್ರೌನ್ ಬೆಲ್ಟ್, ಬಿಜಿಎಸ್ ಶಾಲೆಯ ಸರ್ವಜಿತ್ , ಪರ್ಪಲ್ ಬೆಲ್ಟ್, ಹಾಗೂ ಮಹಮ್ಮದ್ ಐವನ್, ಬ್ರೌನ್ ಬೆಲ್ಟ್, ಗಳಿಸಿದ್ದಾರೆ. ಕರಾಟೆ ಪರೀಕ್ಷೆಗೆ ಮೂಡಿಗೆರೆಯ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆ , ನಳಂದ ಆಂಗ್ಲ ಮಾಧ್ಯಮ ಶಾಲೆ , ಬೆಥನಿ ಆಂಗ್ಲ ಮಾಧ್ಯಮ ಶಾಲೆ , ಎಂಇಎಸ್ ಆಂಗ್ಲ ಮಾಧ್ಯಮ ಶಾಲೆ, ಸೆಂಟ್ ಮಾರ್ಥಸ್ ಶಾಲೆ, ಬಣಕಲ್ ನ ನಜರೆತ್ ಶಾಲೆ, ಆಲ್ದೂರ್ ನ ಪೂರ್ಣ ಪ್ರಜ್ಞಾ ಶಾಲೆ, ಗುಲ್ಲನ ಪೇಟೆಯ ಆರ್.ಎಸ್ ಶಾಲೆ, ಸಕಲೇಶಪುರದ ಜೆಎಸ್ ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ರಾಜೇಂದ್ರನ್ ಅವರು ತಿಳಿಸಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ: IATM ಅಧ್ಯಕ್ಷರಾದ ರೆಂಶಿ ಸುಧಾಕರನ್ ನೇತೃತ್ವದಲ್ಲಿ ನಡೆದ ಕರಾಟೆಯ ಕಲರ್ ಬೆಲ್ಟ್ ಪರೀಕ್ಷೆ…










