ಮೂಡಿಗೆರೆ : ಬಿಜೆಪಿ ಪಕ್ಷದ ವತಿಯಿಂದ ಮಾಸ್ಕ್ ವಿತರಣೆ…

319
firstsuddi

ಮೂಡಿಗೆರೆ : ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು. ಅದರಲ್ಲೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವವರಿಗೆ ಇದು ಅತ್ಯವಶ್ಯಕ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಹಾಗೂ ಸರ್ಕಾರಿ ಆಸ್ಪತ್ರೆ ಸಿಬ್ಬಂಧಿಗಳಿಗೆ ಬಿಜೆಪಿ ತಾಲ್ಲೂಕು ಘಟಕದ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.

ಈ ಕುರಿತು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಜೆ.ಎಸ್ ರಘು ಅವರು, ಮಹಾಮಾರಿ ಕೊರೊನಾ ರೋಗದ ಕುರಿತು ಭಯ ಬೇಡ. ಜಾಗೃತಿ ಕ್ರಮಗಳನ್ನು ಅನುಸರಿಸಬೇಕು. ಜೀವ ಇದ್ದರೆ, ಆರೋಗ್ಯದಿಂದ ಇದ್ದರೆ ಜೀವನ ಸಾದ್ಯ. ಕಾರಣ ಎಲ್ಲರು ಆರೋಗ್ಯದ ಕುರಿತು ಹೆಚ್ಚು ಗಮನ ಕೊಡಿ ಎಂದರು. ಈ ಸಂದರ್ಭದಲ್ಲಿ ನಗರಾಧ್ಯಕ್ಷರಾದ ಪದ್ಮನಾಭ್, ಬಿಜೆಪಿ ಮುಖಂಡರಾದ ಸರೋಜ ಸುರೇಂದ್ರ, ಹಳೇಕೋಟೆ ಮನು, ಪಟ್ಟಣ ಪಂಚಾಯಿತಿ ಸದಸ್ಯರಾದ ಮನೋಜ್, ಕಮಲಾ, ಆಶಾ ಮೋಹನ್, ಸುದೀರ್, ಬಿಜೆಪಿ ಯುವಮೋರ್ಚ ಅಧ್ಯಕ್ಷರಾದ ಸಂಜಯ್ ಕೊಟ್ಟಿಗೆಹಾರ, ಹಾಗೂ ರಂಗನಾಥ್, ಪಟೇಲ್ ಮಂಜು, ಬಾಲುಶೆಟ್ಟಿ ಸೇರಿದಂತೆ ಇತರರು ಇದ್ದರು.