ಮೂಡಿಗೆರೆ :ನಜರೆತ್ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಎನ್.ವೆಂಕಟೇಶ್(48) ಅವರು ಮಂಗಳವಾರ ಮಧ್ಯಾಹ್ನ 12.30ಕ್ಕೆ ಬಣಕಲ್ನ ಸ್ವಗೃಹದಲ್ಲಿ ನಿಧನರಾಗಿದ್ದು, ವೆಂಕಟೇಶ್ ಅವರು ಮೂಡಿಗೆರೆಯ ನಳಂದಾ ಶಾಲೆ, ಸಂತ ಮಾರ್ಥಾಸ್ ಶಾಲೆಯಲ್ಲಿಯೂ ಸೇವೆ ಸಲ್ಲಿಸಿದ್ದು, ನಂತರ ಬಣಕಲ್ ನಜರೆತ್ ಶಾಲೆಯಲ್ಲಿ ಸುಮಾರು 10 ವರ್ಷಗಳಿಂದ ಉತ್ತಮ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವೆಂಕಟೇಶ್ ಅವರಿಗೆ ಕಳೆದ ಒಂದು ತಿಂಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆಸ್ಪತ್ರೆಯಲ್ಲಿ ಸ್ವಲ್ಪ ಚೇತರಿಕೆಯಾದ ನಂತರ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ನಜರೆತ್ ಶಾಲೆಯಲ್ಲಿ ಜನಪ್ರೀಯ ಶಿಕ್ಷಕರಾಗಿ ಮಕ್ಕಳ ಪ್ರೀತಿಯನ್ನು ಗಳಿಸಿದ್ದರು. ಇವರ ಉತ್ತಮ ಶಿಕ್ಷಣದಿಂದ ಅನೇಕ ವಿದ್ಯಾರ್ಥಿಗಳು ಉತ್ತಮ ಶಿಸ್ತನ್ನು ಕಲಿತಿದ್ದರು.
ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಜರೆತ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಬ್ಲ್ಯಾಂಚ್ ಕೊರೆಯಾ ಹಾಗೂ ಶಿಕ್ಷಕರು ಹಾಗೂ ಸಿಬ್ಬಂದಿವರ್ಗ ಮತ್ತು ಮೂಡಿಗೆರೆ ಸಂತ ಮಾರ್ಥಾಸ್ ಶಾಲೆಯ ಶಿಕ್ಷಕರು ಮನೆಗೆ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಇವರ ನಿಧನದಿಂದ ಶಾಲೆಯಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದು ಪಡಿಸಿ, ಶನಿವಾರಕ್ಕೆ ಮುಂದೂಡಲಾಯಿತು.ಮೃತರು ಪತ್ನಿ ಬಿಂದು ಹಾಗೂ ಮಗಳು ನಮನ ಅವರನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರೀಯೆಯು ಸ್ವಗ್ರಾಮ ಹಾಸನ ತಾಲ್ಲೂಕಿನ ಶಾಂತಿಗ್ರಾಮದಲ್ಲಿ ಇಂದು ನಡೆಯಲಿದೆ. ವೆಂಕಟೇಶ್ ಅವರ ನಿಧನಕ್ಕೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ಹಾಗೂ ನಳಂದ ಶಾಲೆಯ ಮುಖ್ಯಸ್ಥೆ ಸಾವಿತ್ರಿ ಸೇರಿದಂತೆ ಹಳೆ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.










