ಕೊಟ್ಟಿಗೆಹಾರ ; ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಾವಳಿ ಒಕ್ಕೂಟದ ವತಿಯಿಂದ ಜಾವಳಿ ಸ.ಹಿ.ಪ್ರಾ ಶಾಲೆ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಚಗೊಳಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಅವರು ಮಾತನಾಡಿ ಕೊರೊನಾ ಅವಧಿಯಲ್ಲಿ ಶಾಲೆಗಳು ಬಾಗಿಲು ಹಾಕಿ ಹಲವು ತಿಂಗಳುಗಳೆ ಕಳೆದಿದ್ದು, ಶಾಲೆಯ ಸುತ್ತ ಗಿಡಗಂಟಿಗಳು ಬೆಳೆದಿತ್ತು. ಇಂದು ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಶಾಲಾವರಣವನ್ನು ಸ್ವಚ್ಚಗೊಳಿಸಲಾಯಿತು. ಗಿಡಗಂಟಿಗಳನ್ನು ತೆರವುಗೊಳಿಸಿದ್ದು, ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಸಂಗ್ರಹಿಸಿ ಒಂದೆಡೆ ಹಾಕಲಾಯಿತು ಎಂದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುರೇಶ್, ಮುಖ್ಯ ಶಿಕ್ಷಕ ಲೋಕೇಶ್, ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರು ಇದ್ದರು.