ಮೂಡಿಗೆರೆ : ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್ ಅವರ ತಂದೆ ಡಿ.ಸಿ.ಕಲ್ಲಪ್ಪ ಗೌಡ ನಿಧನ…

330
firstsuddi

ಮೂಡಿಗೆರೆ : ಕ್ಯಾಪ್ರಿ ಕಾಫಿ ಲಿಂಕ್ಸ್ ಮಾಲೀಕ ಹಾಗೂ ಜಾತ್ಯಾತೀತ ಜನತಾದಳದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್‍ಕುಮಾರ್ ಅವರ ತಂದೆ ಡಿ.ಸಿ.ಕಲ್ಲಪ್ಪಗೌಡ (81) ಅವರು ಇಂದು ಬೆಳಗ್ಗಿನ ಜಾವ 6 ಗಂಟೆಗೆ ತಾಲ್ಲೂಕಿನ ಜೋಗಣ್ಣನಕೆರೆ ಗ್ರಾಮದ ಹಂಡುಗುಳಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು. ಕೃಷಿಕರಾಗಿದ್ದ ಡಿ.ಸಿ.ಕಲ್ಲಪ್ಪಗೌಡ ಅವರು ಪತ್ನಿ ಸಹಿತ ಮೂವರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮ ಹಂಡುಗುಳಿಯ ಕಾಫಿ ಎಸ್ಟೇಟಿನಲ್ಲಿ ಸಂಜೆ 5 ಗಂಟೆಗೆ ನೆರವೇರಿಸಲಾಯಿತು. ಇವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಧರ್ಮೇಗೌಡ, ಎಸ್.ಎಲ್ ಬೋಜೇಗೌಡ, ಮಾಜಿ ಸಚಿವ ಬಿ.ಬಿ ನಿಂಗಯ್ಯ, ಮಾಜಿ ಸಚಿವೆ ಮೋಟಮ್ಮ, ಶಾಸಕ ಎಂ.ಪಿ.ಕುಮಾರಸ್ವಾಮಿ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದರು.