ಇಸ್ಲಮಾಬಾದ್ : ಸುಮಾರು 107 ಮಂದಿ ಪ್ರಯಾಣಿಕರಿದ್ದ ಪಿಐಎ(ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್) ವಿಮಾನವೊಂದು ಪತನವಾಗಿರುವ ಘಟನೆ ಕರಾಚಿ ವಿಮಾನ ನಿಲ್ದಾಣದ ಬಳಿ ನಡೆದಿದೆ. ಲಾಹೋರ್‍ನಿಂದ ಕರಾಚಿ ಕಡೆಗೆ ಹೊರಟಿದ್ದ ಪಿಕೆ-303 ವಿಮಾನದಲ್ಲಿ 99 ಮಂದಿ ಪ್ರಯಾಣಿಕರು ಹಾಗೂ 8 ಮಂದಿ ಸಿಬ್ಬಂದಿ ಸೇರಿ 107 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಕರಾಚಿಯ ರನ್‍ವೇನಲ್ಲಿ ಲ್ಯಾಂಡ್ ಆಗಲು ಇನ್ನು ಕೇವಲ ಒಂದು ನಿಮಿಷ ಇದ್ದಾಗ ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದ್ದು, ಈ ವೇಳೆ ಪಕ್ಕದಲ್ಲಿದ್ದ 8-10 ಮನೆಗಳ ಮೇಲೆ ವಿಮಾನದ ಅವಶೇಷಗಳು ಬಿದ್ದು ಮನೆಗಳು ನಾಶವಾಗಿದೆ ಎನ್ನಲಾಗಿದ್ದು, ವಿಮಾನದಲ್ಲಿದ್ದವರ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ.










