ಯೇಸು ಕ್ರಿಸ್ತನ ಬಗ್ಗೆ ಫೇಸ್ ಬುಕ್ ನಲ್ಲಿ ಅಶ್ಲೀಲ ಪೋಸ್ಟ್, ಕಿಡಿಗೇಡಿ ವಿರುದ್ಧ ದೂರು ದಾಖಲು…

280
firstsuddi

ಕೊಪ್ಪ : ಯೇಸು ಕ್ರಿಸ್ತನ ಬಗ್ಗೆ ಫೇಸ್ ಬುಕ್ ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿರುವವರ ವಿರುದ್ಧ ದೂರು ದಾಖಲಾಗಿರುವ ಘಟನೆ ತಾಲೂಕಿನ ಜಯಪುರದಲ್ಲಿ ನಡೆದಿದೆ. ಕ್ರೈಸ್ತ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಬರೆದು, ಕ್ರಿಸ್ತ ಹಾಗೂ ಮೇರಿ ಜೊತೆಯಲ್ಲಿ ನಿಂತಿರುದನ್ನು ಅಶ್ಲೀಲವಾಗಿ ಕಿಡಿಗೇಡಿಗಳು ಪೋಸ್ಟ್ ಮಾಡಿದ್ದು, ಈ ಬಗ್ಗೆ ಸಂದೀಪ್ ಸರೋನ್ ಎಂಬುವವರು ದೂರು ದಾಖಲಿಸಿದ್ದಾರೆ. ರವೀಂದ್ರ ಗೌಡ ಪಾಟೀಲ್ ಎಂಬುವವರ ಫೇಸ್ ಬುಕ್ ಅಕೌಂಟ್ ನಿಂದ ಈ ಪೋಸ್ಟ್ ಆಗಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.