ಬೆಂಗಳೂರು : ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ಅವರು ತಮ್ಮನ್ನು ನೋಡಲು ಕಾತುರನಾಗಿದ್ದ ಬಾಲಕನನ್ನು ಭೇಟಿಯಾಗುವುದರ ಮೂಲಕ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ. ಬಾಲಕ ಆದರ್ಶ್ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಹುಟ್ಟಿದಾಗಿನಿಂದಲೂ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಹೀಗಾಗಿ ಪುನೀತ್ ರಾಜ್‍ಕುಮಾರ್ ಅವರನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎಂದು ಆಸೆ ಇಟ್ಟುಕೊಂಡಿದ್ದನು. ಹೀಗಾಗಿ ಬಾಲಕನ ಪೋಷಕರು ಒಮ್ಮೆಯಾದರೂ ಭೇಟಿ ಮಾಡಿಸಬೇಕು ಎಂದು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಇದೀಗಾ ಬಾಲಕನ ಆಸೆ ಈಡೇರಿದ್ದು, ಪುನೀತ್ ರಾಜ್‍ಕುಮಾರ್ ಅವರು ಬಾಲಕನ ಬಗ್ಗೆ ತಿಳಿದುಕೊಂಡು ಬಳ್ಳಾರಿಯಿಂದ ಬೆಂಗಳೂರಿಗೆ ಕರೆಸಿಕೊಂಡು ಬಾಲಕನನ್ನು ಭೇಟಿಯಾಗಿದ್ದು, ಅಲ್ಲದೇ ಬಾಲಕನ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ.










