ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆ ಅನಾವರಣದ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ: ಪ್ರಧಾನಿ ನರೇಂದ್ರ ಮೋದಿ…

313
firstsuddi

ಅಹಮದಾಬಾದ್:ಗುಜರಾತ್ ನ ಕೆವಾಡಿಯಾದ ನರ್ಮದಾ ನದಿ ತೀರದಲ್ಲಿ ನಿರ್ಮಿಸಲಾಗಿರುವ 182 ಮೀಟರ್ ಎತ್ತರದ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರ  ಪ್ರತಿಮೆ ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಮೋದಿ ಅವರು ವಿಶ್ವದ ಅತೀ ಎತ್ತರದ ಪ್ರತಿಮೆ ಅನಾವರಣಕ್ಕೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಪಟೇಲರು ಏಕತೆ ಮೂಲಕ ದೇಶದ ಜನರನ್ನು ಒಗ್ಗೂಡಿಸಿದರು. ಏಕತಾ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ಐತಿಹಾಸಿಕ ದಿನ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈ ಬಗ್ಗೆ ಯೋಚಿಸಿದ್ದೆ.  ನಾನು ಪ್ರಧಾನಿಯಾಗಿ ಈ ಪುಣ್ಯ ಕೆಲಸ ಮಾಡುವ ಅವಕಾಶ ಸಿಗುತದೆ ಎಂದು ನಾನು ಭಾವಿಸಿರಲಿಲ್ಲ.ಇಂದು ಹೊಸ ದಾಖಲೆ ಬರೆದಿದೆ .ಈ ದಿನವನ್ನು ಇತಿಹಾಸದಿಂದ ಅಳಿಸಲು ಎಂದಿಗೂ ಸಾಧ್ಯವಿಲ್ಲ. ರೈತನ ಮಗ ಪಟೇಲರ ಸಾಧನೆ ಕಡಿಮೆ ಇಲ್ಲ. 500ಕ್ಕೂ ಹೆಚ್ಚು ಪ್ರಾಂತ್ಯಗಳಲ್ಲಿ ಭಾರತ ಹಂಚಿ ಹೋಗಿತ್ತು. ಭಾರತ ಮಾತೆಯನ್ನು ತುಂಡು ತುಂಡು ಮಾಡುವ ಕಾರ್ಯವನ್ನು ಅವರು ವಿಫಲಗೊಳಿಸಿದ್ದರು. ಪಟೇಲ್ ಅವರ ದೂರದೃಷ್ಟಿ ಮತ್ತು ಕಠಿಣ ನಿಲುವುಗಳೇ ಭಾರತದ ಏಕೀಕರಣಕ್ಕೆ ಕಾರಣ ಎಂದಿದ್ದಾರೆ.

.