ಭಾರತ್ ಬಂದ್ ನಿಂದ ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿಗೆ 31.73 ಲಕ್ಷ ರೂ ನಷ್ಟ…

214
firstsuddi

ಚಿಕ್ಕಮಗಳೂರು :ಭಾರತ್ ಬಂದ್ ನಿಂದ ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿಗೆ  31.73 ಲಕ್ಷ ರೂ ನಷ್ಟವಾಗಿದೆ  ಎಂದು ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ  ಡಿಸಿ ಅನಿಲ್ ಕುಮಾರ್ ಅವರು  ಮಾಹಿತಿ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಆರು ಡಿಪೋಗಳಲ್ಲಿ ಒಟ್ಟು 327 ಬಸ್‍ಗಳು ಸಂಚರಿಸಿಲ್ಲ.   ಚಿಕ್ಕಮಗಳೂರು 70, ಅರಸೀಕೆರೆ 64, ಸಖರಾಯಪಟ್ಟಣ 53, ಕಡೂರು 63, ಮೂಡಿಗೆರೆ 56, ಬೇಲೂರು 21,  ಬಸ್‍ಗಳು ಸಂಚರಿಸಿಲ್ಲ. ಒಟ್ಟು 1,22,571 ಕಿ.ಮೀ. ಕೆ.ಎಸ್.ಆರ್.ಟಿ.ಸಿ ಬಸ್ ಚಲಿಸಿಲ್ಲ. 8 ಮತ್ತು 9ನೇ ತಾರೀಖಿನ ಬಂದ್‍ನಿಂದಾಗಿ ಅಂದಾಜು 31 ಲಕ್ಷ 73,255 ರೂ ನಷ್ಟ ವಾಗಿದೆ ಎಂದು ತಿಳಿಸಿದ್ದಾರೆ.

firstsuddi