ಮಂಗಳೂರು – ಉಡುಪಿಯಲ್ಲಿ ಮರಳು ಮಾಫಿಯಾ : ಚಿಕ್ಕಮಗಳೂರಿನ ಐವರು ಪಿಡಬ್ಲ್ಯುಡಿ ಅಧಿಕಾರಿಗಳು ಪೊಲೀಸರ ವಶಕ್ಕೆ

708

ಚಿಕ್ಕಮಗಳೂರು : ಮರಳು ಮಾಫಿಯಾಗೆ ಸಾಥ್ ನೀಡಿದ್ದರ ಹಿನ್ನೆಲೆಯಲ್ಲಿ ಐವರು ಸರ್ಕಾರಿ ಅಧಿಕಾರಿಗಳು ಪೊಲೀಸರ ವಶಕ್ಕೆ ಪಡೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರಿನ ಐವರು ಪಿಡಬ್ಲ್ಯುಡಿ ಅಧಿಕಾರಿಗಳ ಬಂಧನವಾಗಿದ್ದು, ಮಂಗಳೂರು – ಉಡುಪಿ ನಡೆದಿರುವ ಅಕ್ರಮ ಮರಳು ಮಾಫಿಯಾಗೆ ಸಾಥ್ ನೀಡಿದ್ದರು ಎಂಬ ಹಿನ್ನೆಲೆಯಲ್ಲ ಬಂಧನ ಮಾಡಲಾಗಿದೆ. ಚಿಕ್ಕಮಗಳೂರು ಡಿಸಿಐಬಿ ಪೊಲೀಸರ ವಶದಲ್ಲಿರುವ ಐವರು ಅಧಿಕಾರಿಗಳು, ನಕಲಿ ಬಿಲ್ ಬಳಸಿ ೧೦ ಕೋಟಿಗೂ ಅಧಿಕ ದುರುಪಯೋಗ ಅವರ ಮೇಲಿದೆ. ನಾಲ್ಕು ಸಾವಿರಕ್ಕೂ ಅಧಿಕ ನಕಲಿ ಪರ್ಮೀಟ್ ನೀಡಿದ್ದರ ಜೊತೆಗೆ ಅನೇಕ ಆರೋಪಗಳೊಂದಿಗೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶಪ್ಪ, ಸಹಾಯಕ ಎಂಜಿನಿಯರ್ ಲೋಕೇಶ್, ಎಇ ಚಿರಂಜೀವಿ ಸೇರಿ ಐವರ ಬಂಧನ ಮಾಡಲಾಗಿದೆ. ಪಿಡಬ್ಲ್ಯುಡಿ ಇಲಾಖೆಯ ಇನ್ನೂ ಅನೇಕ ಸಿಬ್ಬಂದಿಗಳಿಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರೆಸಿದ್ದು, ಚಿಕ್ಕಮಗಳೂರು ಜಿಲ್ಲೆಯಿಂದ ಉಡುಪಿ ಹಾಗೂ ಮಂಗಳೂರು ಮರಳು ಮಾಫಿಯಾಕ್ಕೆ ಪರ್ಮೀಷನ್ ನೀಡಿದ್ದರು, ಅಲ್ಲದೇ ಮರಳು ಮಾಫಿಯಾಕ್ಕೆ ಇಲ್ಲಿನ ಇಲಾಖೆಯ ಅಧಿಕಾರಿಗಳ ಸಹಿ ಹಾಗೂ ಸೀಲ್ ಹಾಕಿರುವುದು ಬೆಳಕಿಗೆ ಬಂದಿದೆ.