ಹಿರಿಯ ಚಲನಚಿತ್ರ ನಟ ಕೊಡಗನೂರ ಜಯಕುಮಾರ ಅವರು ಹೃದಯಾಘಾತದಿಂದ ನಿಧನ…

167
firstsuddi

ದಾವಣಗೆರೆ : ಹಿರಿಯ ಚಲನಚಿತ್ರ ನಟ ಹಾಗೂ ರಂಗಕರ್ಮಿ ಕೊಡಗನೂರ ಜಯಕುಮಾರ(72) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜಯಕುಮಾರ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಆಸ್ಪತ್ರೆಯಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೊಡಗನೂರ ಜಯಕುಮಾರ ಅವರು ಕನ್ನಡ ಹಾಗೂ ತೆಲುಗು ಸೇರಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, 2019ರಲ್ಲಿ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.