ಮೂಡಿಗೆರೆ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಹಳೆಯ ಪದ್ದತಿಯನ್ನು ಮುಂದುವರೆಸಬೇಕು ಎಂದು ಹಾಗೂ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಸುಪ್ರೀಂಕೋರ್ಟ್ ತೀರ್ಪುನ್ನು ಪರಮರ್ಷಿಸುವಂತೆ ಅಯ್ಯಪ್ಪ ಸ್ವಾಮಿ ಭಕ್ತರ ಪರವಾಗಿ ಇಂದು ಮೂಡಿಗೆರೆ ತಹಶೀಲ್ದಾರ್ ಪದ್ಮನಾಭಶಾಸ್ತ್ರೀ ಯವರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಕ್ತದಿಗಳಾದ ಆನಂದ್ ಕಣಚೂರು,ಕೊಟ್ಟಿಗೆಹಾರ ಸಂಜಯ್ ,ಪರೀಕ್ಷಿತ್ ಜವಳಿ,ಪ್ರವೀಣ್ ಪೂಜಾರಿ,ಚಂದ್ರು ಬಿಳಗುಳ,ಅವಿನಾಶ್, ಹುಲ್ಲೆಮನೆ ಚಂದ್ರು, ವೆಂಕಟೇಶ್ ಇತರರು ಇದ್ದರು










