ಬಿಜೆಪಿಯವರು ಯಾವ ಕಾರಣಕ್ಕೂ ಮೈತ್ರಿ ಸರ್ಕಾರ ಅಲುಗಾಡಿಸಲು ಸಾಧ್ಯವಿಲ್ಲ: ಎಸ್.ಎಲ್.ಬೋಜೇಗೌಡ…

294

ಚಿಕ್ಕಮಗಳೂರು : ಆಪರೇಷನ್ ಕಮಲ ವಿಚಾರಕ್ಕೆ  ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ  ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರು   ಮೈತ್ರಿ ಸರ್ಕಾರ ಸುಭದ್ರವಾಗಿದೆ.ಬಿಜೆಪಿಯವರು ಯಾವ ಕಾರಣಕ್ಕೂ ಮೈತ್ರಿ ಸರ್ಕಾರ ಅಲುಗಾಡಿಸಲು ಸಾಧ್ಯವಿಲ್ಲ.ಬಿಜೆಪಿಯವರು ಪಾಪ ಭ್ರಮೆಯಲ್ಲಿದ್ದಾರೆ.ಬಿಜೆಪಿಯವರ ಈ ಪ್ರಯತ್ನ ಇವತ್ತು ನಿನ್ನೆಯದಲ್ಲ. ಬಿಜೆಪಿಯವರು ಆರು ತಿಂಗಳಿನಿಂದ ಮೈತ್ರಿ ಸರ್ಕಾರ ಉರುಳಿಸುವ ಕೆಲಸ ಮಾಡ್ತಿದ್ದಾರೆ. ಪ್ರತಿ ಹಬ್ಬದಲ್ಲಿಯೂ ಸಮಿಶ್ರ ಸರ್ಕಾರ ಬೀಳುತ್ತದೆ ಅಂತಾ ಹೇಳ್ತಾರೆ. ಪ್ರತಿಯೊಬ್ಬರಿಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇರುತ್ತೆ, ಇರಲಿ ಸಂತೋಷ ಎಂದಿದ್ದಾರೆ.