ಸಮ್ಮಿಶ್ರ ಸರ್ಕಾರ ಪತನವಾದರೆ ಬಿಜೆಪಿ ಕಾರಣವಾಗುವುದಿಲ್ಲ.- ಶ್ರೀರಾಮುಲು…

254
firstsuddi

ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶ್ರೀರಾಮುಲು ಅವರು ನಾವು ಯಾವ ಶಾಸಕರನ್ನು ಸಂಪರ್ಕ ಮಾಡಿಲ್ಲ.ಸಮ್ಮಿಶ್ರ ಸರ್ಕಾರದಲ್ಲೆ ಹೊಂದಾಣಿಕೆ ಇಲ್ಲ. ಅವರವರೇ ಕಿತ್ತಾಡಿಕೊಂಡು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ವರ್ಗಾವಣೆಗಳ ದಂಧೆಯಲ್ಲಿ ನಿರತವಾಗಿದೆ. ಸಮ್ಮಿಶ್ರ ಸರ್ಕಾರ ಪತನವಾದರೆ ಬಿಜೆಪಿ ಕಾರಣವಾಗುವುದಿಲ್ಲ. ನಾವೇನಾದರೂ ಯಾರನ್ನಾದರೂ ಪಕ್ಷಕ್ಕೆ ಸೆಳೆದ ಕುರಿತು ದಾಖಲೆಗಳಿದ್ದರೆ ತನ್ನಿ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರಿಗೆ ಸವಾಲು ಹಾಕಿದ್ದು,ಬಿಜೆಪಿಯವರು ಯಾವುದೇ ಶಾಸಕರನ್ನು ಪಕ್ಷಕ್ಕೆ ಕರೆದಿಲ್ಲ.ಬೇಕಾದರೆ ದೇವರ ಮೇಲೆ ಪ್ರಮಾಣ ಮಾಡಲೂ ಸಿದ್ಧ ಎಂದು ಶಾಸಕ ಬಿ.ಶ್ರೀರಾಮುಲು ತಿಳಿಸಿದ್ದಾರೆ.