ಬೆಂಗಳೂರು :ಶೃಂಗೇರಿ ಶಾರದಾಂಬೆಯ ದರ್ಶನದಿಂದ ಸಿಎಂ ಮನಸ್ಸು ಪರಿವರ್ತನೆಯಾಗಲಿ. ದಂಗೆ-ದಂಧೆಯನ್ನು ಬಿಟ್ಟು, ನನೆಗುದಿಗೆ ಬಿದ್ದಿರುವ ನಾಡಿನ ಅಭಿವೃದ್ಧಿಯತ್ತ ಗಮನ ಹರಿಸುವ ಸದ್ಬುದ್ಧಿಯನ್ನು ದೇವಿ ಕರುಣಿಸಲಿ. ನಿರಂತರವಾಗಿ ನಡೆಯುತ್ತಿರುವ ದೇಗುಲ ಪ್ರವಾಸದಂತೆ, ರಾಜ್ಯ ಪ್ರವಾಸವನ್ನೂ ಮಾಡುವ ಮನಸ್ಸನ್ನು ಅನುಗ್ರಹಿಸಲಿ. ಶುಭಪ್ರಯಾಣ ಹೆಚ್.ಡಿ ಕುಮಾರಸ್ವಾಮಿಯವರೇ! ಎಂದು ಬಿಜೆಪಿ ಟ್ವಿಟ್ ಮಾಡಿದೆ.











