ಅನ್ನ ಬಿಸಾಡಲು ಹೋದ ಭಕ್ತನಿಗೆ ಅನ್ನದ ಮಹತ್ವ ತಿಳಿಸಿದ ಸಿದ್ಧಗಂಗಾ ಮಠದ ವಿದ್ಯಾರ್ಥಿ…

311
firstsuddi

ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆ ಭಕ್ತಾದಿಗಳಿಗೆ ಅನ್ನದಾಸೋಹ ಮಾಡಲಾಗಿತ್ತು. ಆ ಸಂದರ್ಭದಲ್ಲಿ  ಭಕ್ತರೊಬ್ಬರು ಊಟ ಮಾಡಿ ತಟ್ಟೆಯಲ್ಲೇ ಸ್ವಲ್ಪ ಅನ್ನ ಬಿಡುತ್ತಿದ್ದುದನ್ನು ಗಮನಿಸಿ ವಿದ್ಯಾರ್ಥಿವೋರ್ವ  ಅವರಿಗೆ ಅನ್ನದ ಮಹತ್ವದ ಬಗ್ಗೆ ತಿಳಿ ಹೇಳಿದ್ದಾನೆ. ಭಕ್ತರು  ಊಟ ಮಾಡಿ  ಬಳಿಕ ಅನ್ನ  ಹೆಚ್ಚಾಗಿದೆ, ಸಾರು ಹೆಚ್ಚಾಗಿದೆ  ಎಂದು ತಟ್ಟೆಯಲ್ಲಿ ಅನ್ನವನ್ನು ಬಿಟ್ಟು ತಟ್ಟೆಯನ್ನು ಬಿಸಾಡಲು ಮುಂದಾದಾಗ ವಿದ್ಯಾರ್ಥಿ ಕೂಡಲೇ ಅನ್ನದ ತಟ್ಟೆಯನ್ನು ಎತ್ತಿಕೊಂಡು ಪ್ರಸಾದ ಹಾಳು ಮಾಡಬೇಡಿ ತಿನ್ನಿ  ಎಂದು ಬುದ್ಧಿ ಮಾತು ಹೇಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.