ನವದೆಹಲಿ: ಭಾರತ್ ಬಂದ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರೈತರಿಗೆ ಹಾಗೂ ಯುವಕರಿಗೆ ಭರವಸೆಯನ್ನು ನೀಡಿದ್ದರು ಆದರೆ ಭರವಸೆಯನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಳೆದ 4 ವರ್ಷಗಳಲ್ಲಿ ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ. ಈಗಾಗಲೇ ಪೆಟ್ರೋಲ್ 80 ರೂಪಾಯಿ ದಾಟಿದ್ದು, ಡೀಸೆಲ್ ಸಹ 80 ರೂಪಾಯಿ ಸಮೀಪಕ್ಕೆ ಬಂದು ಕೂತಿದೆ. ತೈಲ ದರವನ್ನು ನಿಯಂತ್ರಿಸುವುದಕ್ಕೆ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ. ಮೋದಿ ಕೇವಲ ಬಾಷಣವನ್ನು ಮಾಡುತ್ತಾರೆ ಏನನ್ನು ಮಾಡುವುದಿಲ್ಲ. ಕಪ್ಪು ಹಣವನ್ನು ಹೊರತರುವಲ್ಲಿ ವಿಫಲವಾಗಿದ್ದು, ನೋಟ್ ಬ್ಯಾನ್ ನಿಂದ ಕಳ್ಳರ ಕಪ್ಪು ಹಣ ಬಿಳಿಯಾಗಿದೆ ಅಷ್ಟೇ . ಸಣ್ಣ ಉದ್ಯಮವರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.










