ಡಿಸೆಂಬರ್ 21 ರಿಂದ ಡಿಸೆಂಬರ್ 30ರವರೆಗೆ ಕರಾವಳಿ ಉತ್ಸವ ನಡೆಯಲಿದೆ: ಜಿಲ್ಲಾಧಿಕಾರಿ ಸಸಿಕಾಂತ್ ಸಿಂಥೆಲ್…

284
firstsuddi

ಮಂಗಳೂರು: ಕರಾವಳಿ ಉತ್ಸವ ಡಿಸೆಂಬರ್ 21 ರಿಂದ ಡಿಸೆಂಬರ್ 30ರವರೆಗೆ ನಡೆಯಲಿದೆ ಎಂದು  ಜಿಲ್ಲಾಧಿಕಾರಿ ಸಸಿಕಾಂತ್ ಸಿಂಥೆಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕರಾವಳಿ ಉತ್ಸವ ಮೈದಾನ, ಪಣಂಬೂರು ಬೀಚ್, ಹಾಗೂ ಕದ್ರಿ ಉದ್ಯಾನವನದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು,  ಕರಾವಳಿ ಉತ್ಸವ ಮೈದಾನದಲ್ಲಿ ವಸ್ತು ಪ್ರದರ್ಶನವನ್ನು ಸಚಿವ ಯು ಟಿ ಖಾದರ್ ಅವರು ಉದ್ಘಾಟನೆ ಮಾಡಲಿದ್ದು, ಸಂಜೆ ಕರಾವಳಿ ಉತ್ಸವವನ್ನು ಸಂಗೀತ ನಿರ್ದೇಶಕ ಗುರುಕಿರಣ್ ಅವರು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವೆ ಡಾ . ಜಯಮಾಲಾ, ಸಚಿವ ಸಾ. ರಾ ಮಹೇಶ್ ಸೇರಿದಂತೆ ಹಲವಾರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸಿಂಥೆಲ್ ಅವರು ತಿಳಿಸಿದ್ದಾರೆ.