ಎರಡು ಕೊಲೆ ಪ್ರಕರಣಗಳಲ್ಲಿ ಸ್ವಯಂ ಘೋಷಿತ ದೇವಮಾನವ ರಾಂಪಾಲ್ ಅಪರಾಧಿ: ಹರಿಯಾಣ ಕೋರ್ಟ್…

249
firstsuddi

ಹರಿಯಾಣ: ಸ್ವಯಂ ಘೋಷಿತ ದೇವಮಾನವ ರಾಂಪಾಲ್ ನನ್ನು ಎರಡು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಹರಿಯಾಣ ನ್ಯಾಯಾಲಯ ಅಪರಾಧಿ ಎಂದು ತೀರ್ಪು ಪ್ರಕಟಿಸಿದ್ದು, ಆಶ್ರಮದಲ್ಲಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ರಾಮಪಾಲ್ ವಿರುದ್ದ ಮೊದಲ ಪ್ರಕರಣವು ನವೆಂಬರ್ 19,  2014ರಲ್ಲಿ ದಾಖಲಾಗಿತ್ತು. ಹಾಗೂ   ಮಗುವನ್ನು ಒಳಗೊಂಡಂತೆ ಐದು ಇತರ ಮಹಿಳೆಯರ ಕೊಲೆಗೆ ಸಂಬಂಧಪಟ್ಟದ್ದಾಗಿದ್ದು,  ಕೇಸ್​ಗೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ. ಆರ್. ಚಲಿಯಾ ತೀರ್ಪು ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣ ಇದೇ ತಿಂಗಳು 16 ಅಥವಾ 17ರಂದು ಪ್ರಕಟವಾಗುವ ನಿರೀಕ್ಷೆಯಿದೆ.