ಮುಖ್ಯಮಂತ್ರಿಗೆ ಡೆತ್​ನೋಟ್ ಬರೆದಿಟ್ಟು​ ರೈತ ಆತ್ಮಹತ್ಯೆಗೆ ಶರಣು…

325
firstsuddi

ಮಂಡ್ಯ : ಡೆತ್ ನೋಟ್ ನಲ್ಲಿ ಮುಖ್ಯಮಂತ್ರಿ ಹೆಸರು ಬರೆದಿಟ್ಟು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದುದ್ದ ಹೋಬಳಿಯ ಕನ್ನಹಟ್ಟಿ ಗ್ರಾಮದಲ್ಲಿ ನಡೆದಿದೆ. ಜಯ ಕುಮಾರ್(43) ಆತ್ಮಹತ್ಯೆಗೆ ಶರಣಾದ ರೈತ. ಡೆತ್ ನೋಟ್ ನಲ್ಲಿ ಮುಖ್ಯಮಂತ್ರಿಗಳ ಸನ್ನಿಧಾನಕ್ಕೆ, ಕರ್ನಾಟಕ ಸರ್ಕಾರ. ಮದುವೆಯಾಗಿ ಸುಮಾರು 15 ವರ್ಷ ಆಗಿದೆ.  ರಕ್ಷಿತಾ(13), ರಾಜೇಶ್(10) ಎಂಬ  ಇಬ್ಬರು ಮಕ್ಕಳಿದ್ದಾರೆ . 35 ಗುಂಟೆ ಜಮೀನು ಹೊಂದಿದ್ದು, ಎರಡು ಲಕ್ಷ ಸಾಲ ಮಾಡಿದ್ದೇನೆ.ಗಂಟಲು ಕ್ಯಾನ್ಸರ್ ಇದ್ದು ವೈದ್ಯರು ಮೂರು ಲಕ್ಷ ಹಣ ಬೇಕು ಎಂದಿದ್ದರು.  80 ಸಾವಿರ ಸಾಲ ಮಾಡಿ ವ್ಯವಸಾಯಕ್ಕೆ ಹಾಕಿದ್ದೆ ಅದೂ ಕೂಡ ಕೈ ಹಿಡಿಯಲಿಲ್ಲ. ಆದ್ದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು, ಜಮೀನಿನಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.