ಸ್ಪೋಟಕ ಸಾಮಗ್ರಿಗಳನ್ನು ಹೊಂದಿದ್ದ ಆರೋಪಿ ಕುರಿತು ತನಿಖೆ ಮುಂದುವರೆಸಿದ್ದೇವೆ : ಎಸ್ಪಿ ಹರೀಶ್ ಪಾಂಡೆ…

177

ಚಿಕ್ಕಮಗಳೂರು : ಮನೆಯ ಟೆರೆಸ್ ಮೇಲೆ ಸ್ಪೋಟಕ ಸಾಮಗ್ರಿಗಳನ್ನು ಹೊಂದಿದ್ದ ಆರೋಪದಡಿ ಶಂಕಿತ ಆರೋಪಿಯೊಬ್ಬರನ್ನು ಕಳಸ ಪೊಲೀಸರು ನಿನ್ನೆ ಬಂಧಿಸಿ ಆರೋಪಿ ಮನೆಯಲ್ಲಿದ್ದ ಪೆಟ್ರೋಲ್ ಬಾಂಬ್, ಜೆಲಿಟಿನ್ ಕಡ್ಡಿ, ಬಾಂಬ್ ತಯಾರಿಕ ಕೆಮಿಕಲ್ ಪೊಲೀಸರು ವಶಪಡಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಎಸ್ಪಿ ಹರೀಶ್ ಪಾಂಡೆ ಅವರು ಪ್ರಕರಣದ ತನಿಖೆ ಮುಂದುವರೆಸಿದ್ದೇವೆ. ಬಂಧಿತ ವ್ಯಕ್ತಿ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದೇವೆ. ನಮ್ಮ ತನಿಖೆ ಪ್ರಕಾರ ಬಂಧಿತ ಆರೋಪಿ ಯಾವುದೇ ಸಂಘಟನೆ ಸೇರಿದವನಲ್ಲ. ಪೆಟ್ರೋಲ್ ಬಾಂಬ್, ಜೆಲಿಟಿನ್ ಕಡ್ಡಿ, ಬಾಂಬ್ ತಯಾರಿಕ ಕೆಮಿಕಲ್ ಎಲ್ಲಿಂದಾ ಬಂತು, ಹೇಗೆ ಬಂತು ಅನ್ನೋದನ್ನ ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.