ತರಗತಿಯಲ್ಲೇ ನೇಣು ಬಿಗಿದು ಮುಖ್ಯ ಶಿಕ್ಷಕ ಆತ್ಮಹತ್ಯೆ…

630
firstsuddi

ದಾವಣಗೆರೆ: ಶಾಲಾ ಮುಖ್ಯ ಶಿಕ್ಷಕರೊಬ್ಬರು ತರಗತಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹರಪ್ಪನಹಳ್ಳಿ ತಾಲೂಕಿನ ಕಮ್ಮತಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಮಲ್ಲೇಶಪ್ಪ(56) ಎಂಬುವವರು  ತಾಲೂಕಿನ ಕಮ್ಮತಹಳ್ಳಿ ಗ್ರಾಮದ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಎಂದಿನಂತೆ ಬೆಳಗ್ಗೆ ಮುಖ್ಯ ಶಿಕ್ಷಕ ಮಲ್ಲೇಶಪ್ಪ ಅವರು ಶಾಲೆಗೆ ಬಂದು,ಆತ್ಮಹತ್ಯೆಗೆ ಶರಣಾಗಿದ್ದು,  ಇತರ ಶಿಕ್ಷಕರು ಬಂದು ನೋಡಿದಾಗ ಕ್ಲಾಸ್ ರೂಂನಲ್ಲೇ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಅರಸೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.