ಮೃತ ಮರಿ ಆನೆಯನ್ನು ಬಿಟ್ಟು ಕದಲದ ತಾಯಿ ಆನೆ…

568
firstsuddi

ಹಾಸನ: ಜನಿಸಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟ ಮರಿ ಆನೆಗಾಗಿ ತಾಯಿ ಆನೆ ರೋಧಿಸುತ್ತಿರುವ ಘಟನೆ ಸಕಲೇಶಪುರ ತಾಲೂಕು ಯಸಳೂರಿನ ಕೊತ್ತನಹಳ್ಳಿ ಬಳಿ ನಡೆದಿದೆ. ಭತ್ತದ ಗದ್ದೆ ಮಧ್ಯದಲ್ಲೇ ಕಾಡಾನೆ ಮರಿಗೆ ಜನ್ಮ ನೀಡಿತ್ತು. ಕಾರಣವೇನು ಗೊತ್ತಿಲ್ಲ ಹುಟ್ಟಿದ ಕೂಡಲೆ ಮರಿ ಆನೆ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದೆ. ತಾಯಿ ಆನೆ ತನ್ನ ಮರಿ ಆನೆಯನ್ನು ಎದ್ದೇಳಿಸಲು ಪ್ರಯತ್ನಿಸುತ್ತಿದ್ದು, ಮರಿಯಾನೆಯನ್ನು ಬಿಟ್ಟು ಹೋಗಿಲ್ಲ. ಗ್ರಾಮಸ್ಥರು ತಾಯಿ ಆನೆಯನ್ನು ಕಾಡಿಗಟ್ಟಲು ಅದೆಷ್ಟೇ ಪ್ರಯತ್ನಿಸಿದರೂ ಅದು ಮಾತ್ರ ಮರಿ ಆನೆಯನ್ನು ಬಿಟ್ಟು ಕದಲಿಲ್ಲ.