ರಾಜ್ಯದ ಸಮ್ಮಿಶ್ರ ಸರ್ಕಾರ ಉರುಳಿ ಹೋಗದು.- ಎಚ್ ವಿಶ್ವನಾಥ್…

757
firstsuddi

ಬೆಂಗಳೂರು– ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ  ಎಚ್ ವಿಶ್ವನಾಥ್ ಅವರು ಕೇಂದ್ರ ಸರ್ಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಯಾವುದೇ ಶಾಶ್ವತ ಕಾರ್ಯಕ್ರಮ ನೀಡಿಲ್ಲ. ಆರ್ಥಿಕ ಅರಾಜಕತೆ ಕಾಣುತ್ತಿದೆ. ಸಾವಿರಾರು ಕೋಟಿ ರೂ. ಹಗರಣ ಮಾಡಿ ಕೆಲವರು ವಿದೇಶಕ್ಕೆ ಪರಾರಿಯಾಗಿದ್ದಾರೆ. ಉಳ್ಳವರ ಏಜೆಂಟ್ ರೀತಿ ಸರ್ಕಾರ ಕೆಲಸ ಮಾಡುತ್ತಿದೆ. ರಾಜ್ಯದ ಸಮ್ಮಿಶ್ರ ಸರ್ಕಾರ ಉರುಳಿ ಹೋಗಲ್ಲ, ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಎಂದು ಹಾಡೇ ಇದೆಯಲ್ಲ ಹಾಗೆ ನಮ್ಮ ಸರ್ಕಾರ ಏನೇ ಮಾಡಿದರೂ ಉರುಳಿಹೋಗದು. ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಲಾಗುತ್ತಿದೆ ಸರ್ಕಾರ ಬೀಳಿಸುವ ಬಿಜೆಪಿಯ ಯಾವ ಪ್ರಯತ್ನವೂ ನಡೆಯುವುದಿಲ್ಲ. ಐದು ವರ್ಷ ಮೈತ್ರಿ ಸರ್ಕಾರ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದು, ಇದೇ ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಸಚಿವರಾಗಿರುವ ಡಿಕೆ ಶಿವಕುಮಾರ್ ವಿರುದ್ಧ ಐಟಿ, ಮತ್ತು ಇಡಿಗಳು ದಾಳಿ ನಡೆಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು ನಾವು ಡಿ.ಕೆ. ಶಿವಕುಮಾರ್ ಪರ,ಅಥವಾ ಇನ್ಯಾರ ಪರವೂ ಅಲ್ಲ. ಅನ್ಯಾಯದ ವಿರುದ್ಧ ನಮ್ಮ ಹೋರಾಟ ಎಂದಿದ್ದಾರೆ.