ಚಿಕ್ಕಮಗಳೂರು : ಪ್ರಜ್ವಲ್ ರೇವಣ್ಣ ಅವರು ತಂದೆ ಹಾಗೂ ಅಜ್ಜನ ಜೊತೆ ಜಿಲ್ಲೆಯ ಕಡೂರಿಗೆ ಆಗಮಿಸಿದ್ದು, ಪ್ರಜ್ವಲ್ ಅವರನ್ನು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದೇ ಹೇಳಲಾಗುತ್ತಿದೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ ಅವರು ಕಡೂರಿಗೆ ಆಗಮಿಸಿದ್ದು, ಪ್ರಜ್ವಲ್ ಅವರು ಕಡೂರು ಮಾಜಿ ಶಾಸಕ ಹಾಗೂ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ದತ್ತ, ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್, ಹಾಗೂ ಕ್ಷೇತ್ರದ ಮುಖಂಡರ ಜೊತೆ ವೇದಿಕೆ ಮುಂಭಾಗ ಕುಳಿತಿದ್ದು, ಸರ್ಕಾರಿ ಯೋಜನೆಗಳ ಉದ್ಘಾಟನೆ ವೇಳೆ ದೇವೆಗೌಡರ ಜೊತೆ ಕಾಣಿಸಿಕೊಂಡಿದ್ದಾರೆ.