ದೇಶದ ಹಿತದೃಷ್ಟಿಯಿಂದ ಒಗ್ಗಟ್ಟಾಗಿ ಚುನಾವಣೆ ಮಾಡ್ತೀವಿ : ಹೆಚ್.ಡಿ ದೇವೇಗೌಡ…

214
firstsuddi

ಚಿಕ್ಕಮಗಳೂರು : ಲೋಕಸಭೆ ಚುನಾವಣೆಗೆ ಮೈತ್ರಿ ಸರ್ಕಾರದಲ್ಲಿ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಡೂರಿನಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಒಂದು ಸೀಟು ಹೆಚ್ಚಾಗ್ಬೋದು ಕಮ್ಮಿಯಾಗ್ಬೋದು, ಆದರೆ ದೇಶದ ಹಿತದೃಷ್ಟಿಯಿಂದ ಒಗ್ಗಟ್ಟಾಗಿ ಚುನಾವಣೆ ಮಾಡ್ತೀವಿ ಎಂದರು.
ಹಾಸನ ಲೋಕಸಭೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು ನನ್ನ ಅಭಿಪ್ರಾಯ ಹೇಳಿದ್ದೇನೆ, ಇನ್ನು ಅಧಿಕೃತವಾಗಿ ಘೋಷಿಸಿಲ್ಲ. ದಯಮಾಡಿ ಮಿಸ್ಟೆಕ್ ಮಾಡ್ಬೇಡಿ, ವಯಸ್ಸಾಯ್ತು ನಾನು ನಿಲ್ಲಲ್ಲ ಎಂದು ಹೇಳಿರೋದು ಸತ್ಯ. ಅಧಿಕೃತವಾಗಿ ಘೋಷಣೆ ಮಾಡ್ಬೇಕು ಎಲ್ಲಾ ರೀತಿಯಲ್ಲೂ ಮಾಡ್ತೀವಿ ಎಂದಿದ್ದಾರೆ.